Police: ಕಾಂಗ್ರೆಸ್ ನಾಯಕನ ಮನೆಯಲ್ಲಿ ಕಳ್ಳತನ ಮಾಡಿದ ಖದೀಮರನ್ನು ಬಂದಿಸುವಲ್ಲಿ ಯಶಸ್ವಿಯಾದ ಪೊಲೀಸರು..!

ಪುತ್ತೂರು ತಾಲೂಕಿನಲ್ಲಿ ಸೆಪ್ಟೆಂಬರ್ 6 ರಂದು ಕಾಂಗ್ರೆಸ್ ನಾಯಕ ಗುರುಪ್ರಸಾದ್ ರೈ ಅವರ ಮನೆಯಲ್ಲಿ ಕಳ್ಳತನ ಮಾಡಿದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಖಕ್ಕೆ ಮುಸುಕು ಹಾಕಿಕೊಂಡು ಬಂದ ಕಳ್ಳರು ಮನೆಯ ಬಾಗಿಲನ್ನು ಒಡೆದು ಒಳನುಗ್ಗಿದ ಖದೀಮರು ಗುರುಪ್ರಸಾದ್ ಅವರು ತಾಯಿ ಕಸ್ತೂರಿ ರೈ ಅವರನ್ನು ಕಟ್ಟಿಹಾಕಿ ಮಾರಾಕಾಸ್ತ್ರಗಳಿಂದ ಬೆದರಿಸಿ ಮನೆಯಲ್ಲಿರುವ 2.40 ಲಕ್ಷ ಬೆಲೆಬಾಳುವ ಚಿನ್ನಾಭರಣ ಮತ್ತು 30 ಸಾವಿರ ನಗದು ದೋಚಿ ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂದಿತರಾದ ಸುಧೀರ್ ಕುಮಾರ್ (ಕಬ್ಬಡಿ ಸುಧೀರ್) ಪೆರುವೈ ವಿಠ್ಠಲ್ ,ಕಾಸಗೋಡ ನ ಕಿರಣ್ ಟಿ, ಕನಂಗಡ್ ನ ಸನಲ್ ಕೆವಿ. ಶಿತಂಗೋಲಿಯ ಮೊಹಮದ್ ಫಿರೋಜ್ ಮತ್ತು ಅಬ್ದುಲ್ ನಾಜಿರ್,ಹೊಸಗಡ್ಡೆಯ ವಸಂತ್ ಎಮ್, ಎಂಬ ಆರು ಜನ ಖದೀಮರನ್ನು ಬಂಧಿಸಿದ್ದಾರೆ.

ಕಳ್ಳತನ ಮಾಡುವ ಮೊದಲು ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮತ್ತು ಗುರುಪ್ರಸಾದ್ ಅವರು ಮೊಬೈಲ್ ಅನ್ನು ನೀರಿನಲ್ಲಿ ಹಾಕಿ ನಂತರ ಕೈಚಳಕ ತೋರಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಏಳು ಜನ ಭಾಗಿಯಾಗಿದ್ದ ಆರು ಜನರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಎಸ್ ಪಿ ಡಿಕೆ ರಿಷ್ಯಂತ್ ತಿಳಿಸಿದ್ದಾರೆ

ಇನ್ನೊಬ್ಬ ಅಪರಾದಿಯಾದ ಕೇರಳದ ಪಚ್ಚಂಗಲದ ನಿವಾಸಿಯಾದ ರವಿ ಎನ್ನುವವನು ಈ ಕಳ್ಳತನಕ್ಕೆ ಸಂಚನ್ನು ರೂಪಿಸಿದ್ದು ಜಬ್ಬಾರ್ ಹತ್ಯೆಗೆ ಸಂಬಂಧಿಸಿದಂತೆ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಈತ ಕಳ್ಳತನ ಮಾಡುವಾಗ ಪೆರೋಲ್ ಮೇಲೆ ಹೊರ ಬಂದಿದ್ದ. ಪೆರೋಲ್ ಮುಗಿದ ನಂತರ ಮತ್ತೆ ಜೈಲಿಗೆ ಹೋದರು. ತನಿಖೆಯ ಭಾಗವಾಗಿ ಬಾಡಿ ವಾರೆಂಟ್ ಮೂಲಕ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

Hubli Railway track: ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ..!

Vinay kulkarni: ಜಿಲ್ಲೆಗೆ ನಿರ್ಬಂಧದಿಂದ ಮುಕ್ತಿ ಪಡೆಯಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಂಕಷ್ಟ..!

ಲೋಕ ಕಲ್ಯಾಣಾರ್ಥಕ್ಕಾಗಿ ಈದ್ ಮಿಲಾದ್ ಮೆರವಣಿಗೆ: ಸೌಹಾರ್ದತೆ ಸಾಕ್ಷಿ

About The Author