Saturday, April 12, 2025

Latest Posts

Police custody: ಅಂತರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಗಳೊಂದಿಗೆ ನಂಟು ಹೊಂದಿದ್ದ ಯುವಕ ತಮಿಳುನಾಡು ಪೊಲೀಸರು ವಶಕ್ಕೆ

- Advertisement -

ಹುಬ್ಬಳ್ಳಿ: ಅಂತಾರಾಜ್ಯ ಡ್ರಗ್ ಪೆಡರಲ್‌ಗಳೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜಗೌಡ ಅಲಿಯಾಸ್ ನಿಂಗನಗೌಡ ಕಾನಗೌಡರ ಎಂಬಾತನನ್ನ ತಮಿಳುನಾಡು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹುಬ್ಬಳ್ಳಿ ನಗರದ ಜನತಾ ಬಜಾರ್‌ನಲ್ಲಿರುವ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್, ಕಳೆದ ಹಲವು ತಿಂಗಳಿಂದ ಅಂತಾರಾಜ್ಯ ಡ್ರಗ್ ಪೆಡಲರ್‌ಗಳೊಂದಿಗೆ ನಂಟು ಹೊಂದಿದ್ದನೆಂದು ಹೇಳಲಾಗಿದೆ. ತಮಿಳನಾಡಿನ ಪೊಲೀಸರು ನಡೆಸುತ್ತಿದ್ದ ತನಿಖೆಯಿಂದ ಪ್ರಕರಣ ಬಹಿರಂಗಗೊಂಡಿದ್ದು, ಡ್ರಗ್ ಪಡೆರಲ್ ಜತೆ ನಂಟು ಅಲ್ಲದೇ ನಿರ್ಬಂಧಿತ ಮೆಡಿಷನ್ ಮಾರಾಟ ಮಾಡುತ್ತಿದ್ದನೆಂದು ತಿಳಿದು ಬಂದಿದೆ.

ತಮಿಳನಾಡಿನ ಕೊಯಮತ್ತೂರಿನ ಪೀಲಮೆಡು ಠಾಣೆ ಪೊಲೀಸರು ಅಲ್ಲಿಯ ಜಾಲವನ್ನು ಎನ್‌ಡಿಪಿಎಸ್ ಆ್ಯಕ್ಟ್ ಅಡಿ ಭೇದಿಸಿದೆ. ಈ ವೇಳೆ ಅಲ್ಲಿನವರನ್ನ ವಿಚಾರಣೆಗೆ ಒಳಪಡಿಸಿದಾಗ ಹುಬ್ಬಳ್ಳಿ ಮೂಲದ ಸೂರಜ್‌ಗೌಡ ಅವರೊಂದಿಗೆ ನಂಟು ಹೊಂದಿರುವುದನ್ನ ಡ್ರಗ್ ಪೆಡರಲ್ ಬಾಯಿಬಿಟ್ಟಿದ್ದಾರೆಂದು ಹೇಳಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಾಲದ ಪತ್ತೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಕೊಯಮತ್ತೂರಿನ ಪೊಲೀಸರು, ನಿರ್ಬಂಧಿತ ಮೆಡಿಷನ್ ಖರೀದಿಸುವ ನೆಪದಲ್ಲಿ ಸೂರಜ್‌ಗೌಡನನ್ನು ಇಲ್ಲಿಯ ಜನತಾ ಬಜಾರ್‌ಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿ, ವಶಕ್ಕೆ ಪಡೆದುಕೊಂಡಿದ್ದಾರೆ.

DK Shivakumar: ಕುಮಾರಕೃಪಾ ಅತಿಥಿಗೃಹದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:

 

Mollywood: ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಹೃದಯಾಘಾತ

https://karnatakatv.net/wp-admin/post.php?post=72295&action=edit

- Advertisement -

Latest Posts

Don't Miss