Dharwad: ಮನೆ ಕಳ್ಳತನ ಪ್ರಕರಣದಲ್ಲಿ ತಲೆ ಮರಿಸಿಕೊಂಡಿದ್ದ ಇಬ್ಬರು ಕುಖ್ಯಾತಿ ಕಳ್ಳರ ಕಾಲಿಗೆ ಫೈರ್ ಮಾಡಿ ಬಂಧನ ಮಾಡುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸ್ ಟೀಂ ಯಶಸ್ವಿಯಾಗಿದೆ.
ಧಾರವಾಡ ರಾಜೀವಗಾಂಧಿ ನಗರದ ಮುಜಮ್ಮಿಲ್ ಸೌದಾಗರ ಮತ್ತು ವಿಜಯ ಅಣ್ಣಿಗೇರಿ ಎಂಬಾತರೇ ಪೊಲೀಸರಿಂದ ಗುಂಡೇಟು ತಿಂದ ಆರೋಪಿಗಳಾಗಿದ್ದಾರೆ. ಇನ್ನೂ ಈ ಇಬ್ಬರು 35 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ ತೆರಳಿದ ವಿದ್ಯಾಗಿರಿ ಠಾಣೆಯ ಪಿಎಸ್‌ಐ ಮಲಿಕಾರ್ಜುನ್ ಹಾಗೂ ಸಿಬ್ಬಂದಿ ಮಹ್ಮದ್ ಇಸಾಕ್ ಮೇಲೆ ಇಬ್ಬರು ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿದರು ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ, ಪಿಎಸ್‌ಐ ಮಲಿಕಾರ್ಜುನ ಆರೋಪಿಗಳ ಕಾಲಿಗೆ ಪ್ರಾಣ ರಕ್ಷಣೆಗಾಗಿ ಫೈರ ಮಾಡಿದ್ದಾರೆ. ಸದ್ಯ ಗುಂಡೇಟು ತಿಂದ ಆರೋಪಿಗಳು ಸೇರಿ ಪೊಲೀಸರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.