ಗಾಂಜಾ ಪ್ರಕರಣದಲ್ಲಿ ಆರೋಪಿಗಳ ಜತೆ ಶಾಮೀಲಾಗಿದ್ದ ಆರೋಪ: ಪೊಲೀಸ್ ಇನ್ಸ್ ಪೆಕ್ಟರ್ ಸಸ್ಪೆಂಡ್..!

ಬೆಂಗಳೂರು : ಕರ್ತವ್ಯಲೋಪದ ಹಿನ್ನೆಲೆ ಹಲಸೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಭೈಯಪ್ಪನಹಳ್ಳಿ ಇನ್ಸ್ ಪೆಕ್ಟರ್ ಪ್ರಶಾಂತ್ ಹೆಚ್ಚುವರಿ ಹೊಣೆ ನೀಡಲಾಗಿದೆ. ಹಲಸೂರು ಪೊಲೀಸ್ ಇನ್ಸ್ ಪೆಕ್ಟರ್ OOD ಮೇಲೆ ಪ್ರಶಾಂತ್ ನೇಮಕ ಮಾಡಲಾಗಿದೆ.

ಹೆಚ್ಚುವರಿ ಹೊಣೆ ನೀಡಿ ಡಿಸಿಪಿ ದೇವರಾಜ್ ಆದೇಶ ನೀಡಿದ್ದಾರೆ. ಕರ್ತವ್ಯಲೋಪ ಹಿನ್ನೆಲೆ ಪ್ರಕಾಶ್ ಸಸ್ಪೆಂಡ್ ಆಗಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ಅವರು ಗಾಂಜಾ ಪ್ರಕರಣದಲ್ಲಿ ಸೀಜ್ ಆಗಿದ್ದ ವಾಹನವನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಈ ಮೂಲಕ ಗಾಂಜಾ ಪ್ರಕರಣದಲ್ಲಿ ಆರೋಪಿಗಳ ಜತೆ ಶಾಮೀಲಾಗಿದ್ದ ಆರೋಪ ಕೇಳಿಬಂದಿತ್ತು. ಪೊಲೀಸ್ ಕಮೀಷನರ್ ದಯಾನಂದ್ ವಿಚಾರಣೆ ನಡೆಸಿ ಸಸ್ಪೆಂಡ್ ಮಾಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ತಪ್ಪುತ್ತಿಲ್ಲ ರಸ್ತೆಗುಂಡಿಗಳಿಗೆ ಮುಕ್ತಿ: ಓ ದೇವರೇ..!

ಹುಲ್ಲಿನ ಬಣವೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ‌ಸರ್ಪ ಪ್ರತ್ಯಕ್ಷ

ಜೈಲರ್ ಮೇಲೆ ಹಲ್ಲೆ ನಡೆಸಿದ ಕಾರಾಗೃಹದ ಖೈದಿ..!

About The Author