ಬೆಂಗಳೂರು : ನಗರದಲ್ಲಿ ಕಳ್ಳರ ಕಾಟ ದಿನೇ ದಿನೇ ಜಾಸ್ತಿಯಾಗ್ತಿರೋದು ಎಲ್ಲಾರಿಗೂ ಗೊತ್ತಿರುವ ವಿಷಯ ಆದರೆ ಪೋಲಿಸರೇ ಕಳ್ಳತನಕ್ಕೆ ಇಳಿದಿರುವ ವಿಷಯ ನಿಮಗೆ ಗೊತ್ತಿದೆಯಾ ಕೇಳುವುದಕ್ಕೆ ಕಹಿಯಾದರೂ ಇದೇ ಸತ್ಯ. ಹೌದು ಕಾನ್ಸ್ಟೇಬಲ್ ಯಲ್ಲಪ್ಪ ಎನ್ನುವ ಪೇದೆ ಬರೋಬ್ಬರಿ ಮೂರು ಮನೆಗಳಲ್ಲಿ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪೇದೆ ಯಲ್ಲಪ್ಪ ಮನೆಗಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಒಟ್ಟು ಮೂರು ಮನೆಗಳ್ಳತನ ಪ್ರಕರಣದಲ್ಲಿ ಕಾನ್ಸ್ಸ್ಟೇಬಲ್ ಯಲ್ಲಪ್ಪ ಭಾಗಿಯಾಗಿದ್ದನು. ಚಂದ್ರಾಲೇಔಟ್, ಚಿಕ್ಕ ಜಾಲದಲ್ಲೂ ಕೈ ಚಳಕ ತೋರಿಸಿದ್ದನು. ಈ ಹಿಂದೆ ಕೂಡ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ತಗಲಾಕಿಕೊಂಡಿದ್ದನು.
ಬಳಿಕ ಊರಿಗೆ ರಿಕವರಿಗೆ ಅಂತಾ ಕರೆದು ಕೊಂಡು ಹೋದಾಗ ಆತ್ಯಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾನೆ. ಊರಿಗೆ ಮಾತ್ರ ಕರೆದು ಕೊಂಡು ಹೋಗಬೇಡಿ ಎಂದು ಪಟ್ಟು ಹಿಡಿದಿದ್ದಾನೆ. ಆದರೀಗ ಜ್ಞಾನಭಾರತಿ ಪೊಲೀಸರು ಕಾನ್ಸ್ಸ್ಟೇಬಲ್ ಯಲ್ಲಪ್ಪನನ್ನು ಅರೆಸ್ಟ್ ಮಾಡಿದ್ದಾರೆ.
ಈ ಹಿಂದೆ ಬನಶಂಕರಿ ಠಾಣೆಯ ಕ್ರೈಂ ವಿಭಾಗದ ಕಾನ್ಸ್ ಟೇಬಲ್ ಆಗಿದ್ದ ಯಲ್ಲಪ್ಪ ಅದೇ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿಸಿ ಅಮಾನತು ಆಗಿದ್ದ. ಆರೋಪಿಗಳ ವಿಚಾರಣೆ ವೇಳೆ ಕಾನ್ಸ್ಸ್ಟೇಬಲ್ ಯಲ್ಲಪ್ಪನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಪ್ರಾಥಮಿಕ ಹಂತದಲ್ಲಿ ಯಲ್ಲಪ್ಪನನ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಯಲ್ಲಪ್ಪನ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಲಾಗಿತ್ತು.
ಆದರೆ ತನ್ನ ಹಳೇ ಚಾಳಿಯನ್ನ ಮುಂದುವರೆಸಿದ್ದ ಯಲ್ಲಪ್ಪ ಮತ್ತೆ ಲಾಕ್ ಅಗಿದ್ದಾನೆ. ಆದರೀಗ ಜ್ಞಾನಭಾರತಿ ಪೊಲೀಸರಿಂದ ಪೊಲೀಸ್ ಕಾನ್ಸ್ಸ್ಟೇಬಲ್ ಯಲ್ಲಪ್ಪನನ್ನು ಬಂಧಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ತಲೆನೋವಾದ ಛಲುವಾದಿ ಮಹಾಸಭಾ ಪ್ರತಿಭಟನೆ: ಬೆಂಗಳೂರು ಚಲೋ..!
ರಜಾಕ್ ಕವಲಗೇರಿ ಹತ್ಯೆ ಪ್ರಕರಣ ನಾಲ್ವರನ್ನು ಬಂಧಿಸಿದ ಶಹರ ಠಾಣೆ ಪೊಲೀಸರು




