- Advertisement -
Dharwad News: ಕುಂದಗೋಳ : ರಟ್ಟಿಗೇರಿ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು 6 ಜನ ಹಾಗೂ ₹13.200 ನಗದು ಹಣ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಹೌದು ! ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದ ಮಂಜುನಾಥ ಕತ್ತಿ, ಅತ್ತಿಗೇರಿ ಗ್ರಾಮದ ನಿಸಾರ ಅಹ್ಮದ ಬಟಕುರ್ಕಿ, ಮಂಡಿಗನಾಳ ಗ್ರಾಮದ ಶಿವರೆಡ್ಡೆಪ್ಪ ತಿರಕಣ್ಣವರ ಹಾಗೂ ರಟ್ಟಿಗೇರಿ ಗ್ರಾಮದ ರಾಜು ಸೂರಣಗಿ, ಮಹೇಶ ತಳ್ಳಳ್ಳಿ, ಗುಡಗೇರಿ ಗ್ರಾಮದ ನಾಗರಾಜ ಬೂದಿಹಾಳ ಆರೋಪಿಗಳಾಗಿದ್ದಾರೆ.
ಇವರುಗಳಿಂದ ನಗದು ಹಣ ಮತ್ತು ಇಸ್ಪೀಟ್ ಎಲೆ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ರಾಜು ಸೂರಣಗಿ ಹಾಗೂ ನಾಗರಾಜ ಬೂದಿಹಾಳ ತಪ್ಪಿಸಿಕೊಂಡಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಕುರಿತು ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -