www.karnatakatv.net :ತುಮಕೂರು : ದಿನೇ ದಿನೇ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಪೊಲೀಸರಿಗೂ ತಲೆ ನೋವು ತಂದಿದೆ. ಹಳ್ಳಿ ಜನರು ಮುಗ್ಧರು . ಇಂತಹ ಮುಗ್ಧ ಜನರ ರಕ್ಷಣೆಗೆ ಖಾಕಿ ಪಡೆ ನಿಂತಿದೆ. ಕಳ್ಳರ ಹಾವಳಿಯಿಂದ ಜಾಗೃತಿ ಮೂಡಿಸಲು ಮುಂದಾಗಿದೆ
ರಾತ್ರಿ ಹೊತ್ತು ಯಾವ ಮನೆ ಬೀಗ ಹಾಕಿರುತ್ತೋ, ಅಂಥ ಮನೆಗಳನ್ನ ಸರ್ಚ ಮಾಡಿ ಚಿನ್ನ, ಬೆಳ್ಳಿ ಮತ್ತೆ ಹಣ ತೆಗೆದುಕೊಂಡು ಹೋಗ್ತಾರೆ. ಹೀಗಂತ ಕಳೆದ ಎರಡು ಮೂರು ದಿನಗಳಿಂದ ಪೊಲೀಸರು ಜನರಲ್ಲಿ ಪ್ರಚಾರದ ಮೂಲಕ ಜಾಗೃತಿ ಮೂಡಿಸುತಿದ್ದಾರೆ. ಇದಕ್ಕೆ ಕಾರಣ ಹೆಚ್ಚಾಗಿರುವ ಕಳ್ಳತನ ಪ್ರಕರಣಗಳು. ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಪೊಲೀಸರು ಹಳ್ಳಿ ಹಳ್ಳಿಗಳಲ್ಲಿ ಜನರಲ್ಲಿ ಎಚ್ಚರಿಕೆ ಜೊತೆ ಜಾಗೃತಿ ಮೂಡಿಸುವಲ್ಲಿ ತೊಡಗಿದ್ದಾರೆ.
ಶತಾಯಗತಾಯ ಮನೆಗಳನ್ನ ಹಿಡಿಯುಲು ಇಗಾಗಲೇ ತಂಡ ರಚನೆ ಮಾಡಲಾಗಿದೆ. ರಾತ್ರಿ ವೇಳೆಯಲ್ಲೇ ಹಳ್ಳಿಗಳಲ್ಲಿ ಇರೋ ಒಂಟಿ ಮನೆ, ಬೀಗ ಹಾಕಿರೋ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದೆ ಈ ಗ್ಯಾಂಗ್ . ಈ ಗ್ಯಾಂಗ್ ಬಗ್ಗೆ ಖಾಕಿ ಒಂದಿಷ್ಟು ಮಾಹಿತಿ ಕಲೆ ಹಾಕಿದ್ದು, ಮನೆಗಳರನ್ನ ಹಿಡಿಯೋಕೆ ಸಹಾಯ ಆಗ್ಲಿ ಅಂತಾ ಪೊಲೀಸರು ಜನರ ಸಹಕಾರ ಕೋರಿದ್ದಾರೆ. ಇದು ಜನರಲ್ಲಿ ಒಂದಿಷ್ಟು ಆತಂಕದ ಜೊತೆ ಎಚ್ಚರಿಕೆಯಿಂದ ಇರಲು ಪೂರಕವಾಗಿದೆ ಅಂತಾರೆ ಸ್ಥಳೀಯರು.
ನೊಣವಿನಕೆರೆ ಪೊಲೀಸ್ ಠಾಣೆಗೆ 78 ಹಳ್ಳಿಗಳು ಬರಲಿದೆ. ಪೊಲೀಸರು ಜೀಪ್ ನಲ್ಲಿ ತೆರಳಿ ಜನರನ್ನ ಒಂದಡೆ ಸೇರಿಸಿ ಮಾಹಿತಿ ನೀಡಿದ್ರು. ಇದ್ರ ಜೊತೆ ಎರಡು ಆಟೋಗಳಲ್ಲಿ ಕೂಡ ಗ್ರಾಮಗಳಲ್ಲಿ ಹೋಗಿ ಜನರನ್ನ ಜಾಗೃರೂಕತೆಯಿಂದ ಇರುವಂತೆ ಎಚ್ಚರಿಸಲಾಗುತ್ತಿದೆ. ಕಳ್ಳರನ್ನ ತಡೆಯಲು ನೊಣವಿಕೆರೆ ಪೊಲೀಸರು ಕೈಗೊಂಡಿರುವ ಕೆಲಸ ಗಮನಾರ್ಹ. ಇದಕ್ಕೆ ಪರಿಹಾರ ಜನರಲ್ಲಿ ಜಾಗೃತಿ ಒಂದೇ .
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು