ರಾಜಕೀಯ: ಇಂದು ಕಾಂಗ್ರೆಸ್ ಸರ್ಕಾರದಿಂದ ಸಿದ್ದರಾಮಯ್ಯನವರು ತಮ್ಮ14 ನೇ ಬಜೆಟ್ ಮಂಡನೆ ಇಂದು ಮಧ್ಯಾಹ್ನ12 ಗಂಟೆಗೆ ಘೋಷಣೆಯಾಗಲಿದೆ.ಈ ಬಜೆಟ್ ನ ಬಗ್ಗೆ ರಾಜ್ಯದ ಜನತೆ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.ಇಂದಿನ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಿದ್ದಾರೆ ಎನ್ನುವುದನ್ನು ಬಜೆಟ್ ಮಂಡನೆ ನಂತರ ತಿಳಿಯಲಿದೆ.
ಇಂದಿನ ಬಜೆಟ್ ಮಂಡನೆಯ ಮೂಲಕ ದೇಶಕ್ಕೆ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.ಐದು ಗ್ಯಾರಂಟಿಗಳ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಇನ್ನಷ್ಟು ಉಚಿತ ಭಾಗ್ಯಗಳ ಆಫರ್ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇಂದಿನ ಬಜೆಟ್ ಮೊತ್ತ ಸುಮಾರು 3.35 ಲಕ್ಷ ಕೋಟಿ ಕೋಟಿ ದಾಟುವ ಸಾದ್ಯತೆ ಇದೆ.ಆಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಹಾಯ ಗೌರವಧನ ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ. ಹಾಗೆಯೆ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಘೋಷಣೆ ಮಾಡಲಿದೆ.