ಕರ್ನಾಟಕ ವಿಧಾನಸಭಾ ಚುನಾವಣೆ ಮೆ 10 ರಂದು ನಡೆಯಲಿದ್ದು ಎಲ್ಲಾ ಪಕ್ಷಳು ಪ್ರಚಾರದಲ್ಲಿ ತೊಡಗಿವೆ. ಜೆಡಿಎಸ್ ಮತ್ಉ ಕಾಂಗ್ರೆಸ್ ಪಕ್ಷದಿಂದ ಈಗಾಗಲೆ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಆದರೆ ಬಿಜೆಪಿ ಬಿಜೆಪಿಯಿಂದ ಈವರೆಗೂ ಅಭ್ಯರ್ಥಿ ಟಿಕೆಟ್ ನೀಡಿಲ್ಲ. ಹಾಗಾಗಿ ಕೆಲವು ಹಿರಿಯ ನಾಯಕರು ಹಾಗೂ ಹಾಲಿ ಶಾಸಕರು ಟಿಕೆಟ್ ನೀಡುವ ಮೊದಲು ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ. ಇದರ ಸಾಲಿನಲ್ಲಿ ಮುಖ್ಯಮಂತ್ರಿಗಳು ಸಹ ಇದ್ದಾರೆ ಇನ್ನುವುದೇ ಹಾಸ್ಯಸ್ಪದ.
ತಮ್ಮ ತವರು ಜಿಲ್ಲೆಯಾದ ಹಾವೆರಿ ಜಿಲ್ಲೆಯ ಶಿಗ್ಗಾವಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿ ಗೆಲುವನ್ನು ಸಾಧಿಸುವುದಲ್ಲದೆ ರಾಜ್ಯದ ಮುಖ್ಯಮಂತ್ರಿಯಾಗುವುದರ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದರು.
ಆದರೆ ಈ ಬಾರಿ ಅವರಿಗೂ ಸಹ ಚುನಾವಣೆಯ ಭಯ ಶುರುವಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಸಹ ಶಿಗ್ಗಾವಿಯಲ್ಲಿ ಸ್ಪರ್ಧೆ ಮಾಡಲು ಹಿಂಜರಿಯುತಿದ್ದಾರೆ. ಏಕೆಂದರೆ ಈ ಬಾರಿ ಕಾಂಗ್ರೆಸ್ ಪಕ್ಷ ಬೊಮ್ಮಾಯಿಯವರನ್ನು ಸೋಲಿಸಲು ದಿಟ್ಟ ನಿರ್ದಾರ ಹಾಕಿಕೊಂಡಂತಿದೆ .
ಆದರೆ ಬೊಮ್ಮಾಯಿಯವರು ಈ ಮೊದಲು ಜನತಾದಳ ಮೂಲದವರು ಹಾಗಾಗಿ ಜೆಡಿಎಸ್ ಪಕ್ಷದವರು ಬಸವರಾಜ ಬೊಮ್ಮಯಿ ಜನತಾದಳ ಮೂಲದ ನಾಯಕ, ಹೀಗಾಗಿ ಅವರ ರಕ್ಷಣೆಗೆ ಜೆಡಿಎಸ್ ಮುಂದಾಗುವ ಸಾಧ್ಯತೆಯಿದೆ, ಈ ಹಿನ್ನೆಲೆಯಲ್ಲಿ ದಳಪತಿಗಳು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅವರನ್ನ ಬಿಟ್ಟು, ಇವರನ್ನ ಬಿಟ್ಟು ಇನ್ನೊಬ್ಬರಿಗೆ ಜೆಡಿಎಸ್ ಟಿಕೆಟ್ ನೀಡಲು ಮುಂದಾದ ಕುಮಾರಣ್ಣ