Sunday, October 27, 2024

Latest Posts

C.C Patil: ಬಜೆಟ್ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವರು

- Advertisement -

ರಾಜಕೀಯ ಸುದ್ದಿ: ಶುಕ್ರವಾರ  ಮುಖ್ಯಮಂತ್ರಿ  ಸಿದ್ದರಾಮಯ್ಯನವರು ರಾಜ್ಯದ ಬಜೆಟ್ ಮಂಡನೆ ಮಾಡಿದರು. ಕಾಂಗ್ರೆಸ್ ಗ್ಯಾರಂಟಿಗಳಿಗೆ ಸಾವಿರಾರು ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿದರು. ಹಾಗೆಯೆ ಇಸ್ಲಾಂ ಧರ್ಮದ ಮಸೀದಿಳಿಗೆ ಮತ್ತು ಕ್ರೈಸ್ತ ಮಶಿನರಿಗಳಿಗೆ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿದ್ದಾರೆ ಆದರೆ ಹಿಂದು ಧರ್ಮಕ್ಕೆ ಯಾವುದೇ ರೀತಿಯ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಸಿ ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಗದಗದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ ಸಿ ಪಾಟೀಲ್ ಅವರು ಬಜೆಟ್ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಾಂಗ್ರೇಸ್ ಪಕ್ಷ ಸಂಪೂರ್ಣ ಹಿಂದೂ ವಿರೋಧಿ ಸರ್ಕಾರವಾಗಿದೆ ಎಂದು ನಿನ್ನೆ ನಡೆದ ಬಜೆಟ್ ನಲ್ಲಿ ಮತ್ತೊಮ್ಮೆ ಸಾಬೇತು ಮಾಡಿದೆ.

ವೀರಶೈವ, ಹಿಂದೂ ಪರಂಪರೆಯ ಮಠಗಳಿಗೆ ಬಿಜೆಪಿ ಸರ್ಕಾರ ನೀಡಿದ ಅನುದಾನವನ್ನು . ಶ್ರೀಶೈಲ ಮಠ, ಬಾಳೆಹೊನ್ನೂರು ರಂಭಾಪೂರಿ ಮಠ ಸೇರಿದಂತೆ ವಿವಿಧ ಮಠಗಳಿಗೆ ಕೊಟ್ಟಿರುವ ಕೋಟಿ ಕೋಟಿ ಅನುದಾನ ಹಿಂಪಡೆದಿದೆ  ಮಾಡಿದ್ದಾರೆ. ಹೊನ್ನೂರು ಮಠಕ್ಕೆ ಕೊಟ್ಟಿರುವ ಐದು ಕೋಟಿ ಅನುದಾನ ಹಿಂಪಡೆದಿದ್ದಾರೆ.  ಪಂಚಪೀಠದ ಮೊದಲ ಪೀಠ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಅಂತಾ ಭೋಧನೆ ಮಾಡಿದ ಪೀಠ ಅಂತಹ ಪೀಠಕ್ಕೆ ಯಾವುದೇ ಜಾತಿ ಬೇಧ ಮಾಡದ ಮಠಕ್ಕೆ ಈ ರೀತಿ ಅನ್ಯಾಯ ಮಾಡುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

Nagashourya : ಸಕ್ಸಸ್ ಮೀಟ್ ನಲ್ಲಿ ಸಿಟ್ಟಾದ ನಟ..?!

Siddaramaiha : ಕನ್ನಡಿಗರನ್ನು ರಕ್ಷಿಸಲು ನೆರವು- ಸಿಎಂ ನಿರ್ದೇಶನ

Laxmi Hebbalkar : ನೊಂದ ಮಹಿಳೆಗೆ ಕೇವಲ ಐದು ಗಂಟೆಗಳ ಒಳಗೆ ವಿಧವಾ ವೇತನ ಮಂಜೂರು ಮಾಡಿಸಿದ ಸಚಿವೆ..!

 

 

 

- Advertisement -

Latest Posts

Don't Miss