Monday, April 14, 2025

Latest Posts

ಜಿ.ಟಿ ದೇವೇಗೌಡರ ರಾಜಕೀಯ ಜೀವನ ಅಂತ್ಯ..!?

- Advertisement -

ಕರ್ನಾಟಕ ಟಿವಿ ಸಂಪಾದಕೀಯ : ಶಿವಕುಮಾರ್ ಬೆಸಗರಹಳ್ಳಿ

ಜಿಟಿ ದೇವೇಗೌಡ ಜೆಡಿಎಸ್ ನಾಯಕರ ವಿರುದ್ಧ ತೊಡೆತಟ್ಟಿದ್ದಾರೆ.. ಜೆಡಿಎಸ್ ವಿರೋಧಿಗಳು ಜಿ.ಟಿ ದೇವೇಗೌಡ ಮತ್ತು ಪುತ್ರ ಹರೀಶ್ ಗೌಡ ದಳಪತಿಗಳಿಗೆ ಸಖತ್ ಕೌಂಟರ್ ಕೊಡ್ತಿದ್ದಾರೆ ಅಂತ ಖುಷಿಯಾಗಿದ್ದಾರೆ.. ಆದ್ರೆ ಜಿ.ಟಿ ದೇವೇಗೌಡರ ಸ್ಥಿತಿ ಒಳಗೊಳಗೆ ಯಾರಿಗೂ ಬೇಡವಾದ ವ್ಯಕ್ತಿಯಾಗಿದ್ದಾರೆ.. ಬೆಳಗ್ಗೆ ಬಿಜೆಪಿ, ಕತ್ತಲಾದ್ಮೇಲೆ ಕಾಂಗ್ರೆಸ್ ಅನ್ನುವ ಜಿಟಿಡಿ ನಿಲುವು ಅವರಿಗೆ ಮುಳುವಾಗಿದೆ..

2018ರ ಚುನಾವಣೆಯಲ್ಲಿ ಜಿ.ಟಿ ದೇವೇಗೌಡ ಗೆಲುವು ಸಾಧಿಸಿದ್ದು 3 ಪಕ್ಷಗಳ ಬೆಂಬಲದಿಂದ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ರೆ ಸಿದ್ದರಾಮಯ್ಯ ಗೆಲುವು ಸಾಧಿಸ್ತಿದ್ರು. ಆದ್ರೆ,ಬಿಜೆಪಿ ಸಿದ್ದರಾಮಯ್ಯ ಸೋಲಿಸಬೇಕು ಅಂತ ಗ್ರಾಮ ಪಂಚಾಯ್ತಿಯಲ್ಲೂ ಗೆಲ್ಲದ ವ್ಯಕ್ತಿಗೆ ಟಿಕೆಟ್ ಕೊಡುವುದರ ಮೂಲಕ ಜಿ.ಟಿ ದೇವೇಗೌಡರ ಗೆಲುವಿಗೆ ಕಮಲ ಪಕ್ಷದ ಮತಗಳನ್ನ ವರ್ಗಾವಣೆ ಮಾಡಿತು.. ಇದೀಷ್ಟೆ ಅಲ್ಲ ಒಳಗೊಳಗೆ ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯ ಸೋಲಿಗೆ ಕಾರಣವಾಗಿದ್ದು ಓಪನ್ ಸೀಕ್ರೆಟ್.. ಸ್ವತಃ ಜಿ,ಟಿ ದೇವೇಗೌಡ ಸಹ ತನ್ನ ಗೆಲುವಿಗೆ ಬಿಜೆಪಿ ಬೆಂಬಲ ಕೊಟ್ಟಿದ್ದನ್ನ ಬಹಳಷ್ಟು ಕಡೆ ಹೇಳಿದ್ದಾರೆ. ಆದ್ರೆ, ಈಗ ಮಾತ್ರ ಬಿಜೆಪಿ ಬಿಡಿ ಕುಮಾರಸ್ವಾಮಿ ಸಪೋರ್ಟ್ ಇಲ್ಲದೇ ನಾನೊಬ್ಬನೆ ಎಂಎಲ್ ಎ ಆದೆ ಅನ್ನುವ ರೇಂಜಿಗೆ ವರ್ತಿಸುತ್ತಿದ್ದಾರೆ.. ಇದೀಷ್ಟೆ ಅಲ್ಲ ಜೆಡಿಎಸ್ ನಿಷ್ಠನಾದ ಮಾಜಿ ಸಚಿವ ಸಾರಾ ಮಹೇಶ್ ಕ್ಷೇತ್ರ ಕೆ.ಆರ್ ನಗರಕ್ಕೆ ಮಗ ಹರೀಶ್ ಗೌಡರನ್ನ ಕಳುಹಿಸಿ ರಾಜಕೀಯ ದಾಳ ಉರುಳಿಸಿದ ರೀತಿ ಬಿಲ್ಡಪ್ ಕೊಡ್ತಿದ್ದಾರೆ. ಇದೆಲ್ಲದರ ಮಧ್ಯೆ ಸಿಡಿದೆದ್ದಿರುವ ಕುಮಾರಸ್ವಾಮಿ ಜಿ.ಟಿ ದೇವೇಗೌಡರನ್ನ ಮತ್ತೆ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಜಿ.ಟಿ.ಡಿಗೆ ಬಿಜೆಪಿ ಬಾಗಿಲು ಸಹ ತೆರೆಯೋದಿಲ್ಲ ಅಂತ ಜಿ.ಟಿ ದೇವೇಗೌಡರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ..

ಜಿ.ಟಿ ದೇವೇಗೌಡರಿಗೆ ಬಿಜೆಪಿ ಬಾಗಿಲು ಬಂದ್ ಯಾಕೆ..?

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದರೂ  ಜಿಟಿ ದೇವೇಗೌಡ  ಮಾತ್ರ ಒಳಗೊಳಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹಗೆ ಬೆಂಬಲ ಕೊಟ್ಟಿದ್ರು.. ಆ ವೇಳೆ ಜಿ,ಟಿ ದೇವೇಗೌಡ  ಮುಂದಿನ ಚುನಾವಣೆಗೆ ಬಿಜೆಪಿ ಸೇರ್ತಾರೆ ಅಂತ ಎಲ್ಲರೂ ಮಾತಾನಾಡಿಕೊಂಡಿದ್ರು.. ಆದ್ರೆ, ಹುಣಸೂರು ಬೈ ಎಲೆಕ್ಷನ್ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಗೆ ಬೆಂಬಲ ಕೊಟ್ಟು ಬಿಜೆಪಿಯ ವಿಶ್ವನಾಥ್  ಸೋಲಿಗೆ ಕಾರಣರಾದ್ರು.. ಈ ಕಾರಣದಿಂದ ಬಿಜೆಪಿ ನಾಯಕರು ಸಹ ಜಿ.ಟಿ ದೇವೇಗೌಡರು ಬೆಳಗ್ಗೆ ಬಿಜೆಪಿ ,, ಕತ್ತಲಾದಮೇಲೆ ಕಾಂಗ್ರೆಸ್ ಅಂತಾರೆ.. ಹೀಗಾಗಿ ನಮಗೆ ಬೇಡವೇ ಬೇಡ ಅಂತ ನಿರ್ಧರಿಸಿದ್ದಾರೆ.. ಇಷ್ಟೆ ಅಲ್ಲ 2008ರಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದ ಜಿಟಿ ದೇವೇಗೌಡ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ರು.. ಮೂರನೇ ಸ್ಥಾನಕ್ಕೆ ಕುಸಿದಿದ್ದ ಜಿ.ಟಿಡಿಯನ್ನ ಯಡಿಯೂರಪ್ಪ ಆಗ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ರು. ಆದ್ರೆ, ನಿಯತ್ತಿನಿಂದ ಬಿಜೆಪಿಯಲ್ಲಿ ಇರದ ಜಿಟಿಡಿ ವಾಪಸ್ ಜೆಡಿಎಸ್ ಸೇರಿದ್ರು. ಈ ಕಾರಣದಿಂದ ಜಿಟಿಡಿಗೆ ಬಿಜೆಪಿ ಬಾಗಿಲು ಬಹುತೇಕ ತೆಗೆಯಲ್ಲ.. ಇನ್ನು ಈ ಬಾರಿ ಬಿಜೆಪಿಯಿಂದ ಒಕ್ಕಲಿಗ ಸಮುದಾಯದ ಜೆಡಿಎಸ್ ನಿಂದ ದೂರ ಸರಿದಿರುವ ಎಂಎಲ್ ಸಿ ಸಂದೇಶ್ ನಾಗರಾಜ್ ಅವರ ಪುತ್ರ ಬಿಜೆಪಿ ಯುವ ಮುಖಂಡ ಸಂದೇಶ್ ಸ್ಪರ್ಧೇ ಮಾಡಲು ಮುಂದಾಗಿದ್ದಾರೆ.. ಹೀಗಾಗಿ ಚಾಮುಂಡೇಶ್ವರಿಯಲ್ಲಿ ಜಿಟಿಡಿ ಅತಂತ್ರರಾಗಿದ್ದಾರೆ..

ಡಿಕೆ ಶಿವಕುಮಾರ್ ನಂಬಿ ಕೆಟ್ಟರಾ ಜಿಟಿಡಿ..?

ಇದೀಗ ಜಿಟಿಡಿ ಮುಂದೆ ಇರುವ ಕಾಂಗ್ರೆಸ್.. ಆದ್ರೆ ಜಿಟಿ ದೇವೇಗೌಡ ಚಾಮುಂಡೇಶ್ವರಿಯಲ್ಲಿ ಗೆಲುವು ಸಾಧಿಸಿದ್ದೇ ಕಾಂಗ್ರೆಸ್ ನ ಸಿದ್ದರಾಮಯ್ಯ ವಿರುದ್ಧ. ಹೀಗಿರುವಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿರುವ ವರೆಗೆ ಜಿಟಿ ದೇವೇಗೌಡರಿಗೆ ಕಾಂಗ್ರೆಸ್ ನಲ್ಲಿ ಅವಕಾಶ ಇಲ್ಲವೇ ಇಲ್ಲ.. ಯಾಕಂದ್ರೆ, 2023ರ ಚುನಾವಣೆಗೆ ವರುಣಾ ಕ್ಷೇತ್ರದ ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಚಾಮುಂಡೇಶ್ವರಿಗೆ ಬರುವ ಸಾಧ್ಯತೆ ಇದೆ.. ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುವ ಕಾರಣ ಯತೀಂದ್ರ ಕ್ಷೇತ್ರ ಬದಲಾವಣೆ ಮಾಡಿಕೊಳ್ತಾರೆ ಅಂತ ಹೇಳಲಾಗ್ತಿ್ದೆ.. ಇನ್ನು ಹುಣಸೂರಿಗೆ ಜಿಟಿ ದೇವೇಗೌಡರು ವಾಪಸ್ ಹೋಗಬಹುದು ಅಂದರೆ ಈಗಾಗಲೇ ಅಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಮಂಜುನಾಥ್ ಬಲಿಷ್ಠವಾಗಿದ್ದಾರೆ. ಇತ್ತ ಕೆ.ಆರ್ ನಗರದಲ್ಲಿ ಕಾಂಗ್ರೆಸ್ ನಿಂದ ಕಾಂಗ್ರೆಸ್ ಹಿರಿಯ ನಾಯಕ ದೊಡ್ಡಸ್ವಾಮೇಗೌಡ ಹಾಗೂ ಅವರ ಪುತ್ರ ರವಿಶಂಕರ್ ಸಕ್ರಿಯವಾಗಿದ್ದಾರೆ.. ಡಿಕೆ ಶಿವಕುಮಾರ್ ನನ್ನನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ತಾರೆ ಅನ್ನುವ ಆತುರದಲ್ಲಿ ಜಿಟಿಡಿ ತೋರಿದ ಯಡವಟ್ಟು ಇದೀಗ ಅಂತಂತ್ರರಾಗಿದ್ದಾರೆ..  ಸಿದ್ದರಾಮಯ್ಯ ಕಾಂಗ್ರೆಸ್ ತೊರೆದರೆ ಮಾತ್ರ ಜಿಟಿ ದೇವೇಗೌಡರಿಗೆ ಕಾಂಗ್ರೆಸ್ ನಲ್ಲಿ ಅವಕಾಶ ಸಿಗಲಿದೆ. ಅದರ ಹೊರತಾಗಿ ಜಿಟಿಡಿ ರಾಜಕೀಯ ಬಹುತೇಕ ಅಂತ್ಯವಾಗಲಿದೆ..

ವೀಕ್ಷಕರೇ ನಿಮ್ಮ ಪ್ರಕಾರ ಜಿಟಿ ದೇವೇಗೌಡ ಯಾವ ಪಕ್ಷ ಸೇರಿದರೆ ಸೂಕ್ತ..? ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss