Political News: ಬಿಹಾರದಲ್ಲಿ ಚುನಾವಣಾ ಫಲಿತಾಂಶದ ಭರಾಟೆ ಜೋರಾಗಿದ್ದು, ಅಲಿನಗರದಿಂದ ಸ್ಪರ್ಧಿಸಿದ್ದ ಗಾಯಕಿ ಮೈಥಿಲಿ ಮುನ್ನಡೆ ಸಾಧಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿರುವ ಅವರು, ರಾಜಕೀಯಕ್ಕೆ ನಾನು ಬಂದಾಗ, ಸ್ವಲ್ಪ ಮುಜುಗರ, ಯೋಚನೆ ಇತ್ತು. ಏಕೆಂದರೆ, ಎಂಥ ಟ್ರೋಲ್ ಆದರೂ ನಾವು ಅದನ್ನು ಎದುರಿಸಬೇಕಿತ್ತು. ಸಂಗೀತದ ಪ್ರಪಂಚದಿಂದ ರಾಜಕೀಯ ಪ್ರಪಂಚಕ್ಕೆ ಬರುವುದು ಸುಲಭವಲ್ಲ.
ಆದರೆ ಈಗ ನಾನು ಸ್ಟ್ರಾಂಗ್ ಆಗಿದ್ದೇನೆ. ನನಗೆ ಬಿಡುವಿಲ್ಲದೇ, ಕರೆ ಬರುತ್ತಿದೆ. ಹಲವರು ಅಭಿನಂದನೆ ಕೋರುತ್ತಿದ್ದಾರೆ. ಖುಷಿಯಾಗುತ್ತಿದೆ ಎಂದಿದ್ದಾರೆ. ಅಲ್ಲದೇ ನಿರೂಪಕರು ಅಲಿನಗರದ ಹೆಸರನ್ನು ಬದಲಿಸಿ ಸೀತಾಪುರ ಅಥವಾ ರಾಮನಿಗೆ ಸಂಬಂಧಿಸಿದ ಹೆಸರನ್ನು ಯಾವಾಗ ಇರಿಸುತ್ತೀರಿ ಎಂದು ಕೇಳಿದಾಗ., ಅದಕ್ಕೆ ಉತ್ತರಿಸಿದ ಮೈಥಿಲಿ, ಇದರ ಬಗ್ಗೆ ಮತ್ತು ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾನು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇನೆ ಎಂದಿದ್ದಾರೆ.
ಮೈಥಿಲಿ ಪ್ರಸಿದ್ಧ ಭಕ್ತಿಗೀತೆ ಹಾಡುವ ಗಾಯಕಿಯಾಗಿದ್ದು, ಪ್ರಧಾನಿ ಮೋದಿ ಕೂಡ ಈಕೆಗೆ ಪ್ರಶಸ್ತಿ ಪ್ರಧಾನ ಮಾಡಿದ್ದರು. ಇದೀಗ ಬಿಹಾರ ಚುನಾವಣೆ ಹತ್ತಿರ ಬಂದಾಗ, ಈಕೆ ಬಿಜೆಪಿ ಸೇರಿದ್ದು, ಬಿಜೆಪಿ ಅಲಿನಗರದಿಂದ ಸ್ಪರ್ಧಿಸಿದ್ದರು. ಇದೀಗ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಾರೆ.


