Saturday, April 19, 2025

Latest Posts

ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ನೀಡಿದ್ರು ಭರ್ಜರಿ ಗಿಫ್ಟ್…!

- Advertisement -

Political News:

Feb:24: ಎಲೆಕ್ಷನ್ ಬಂತೂ ಅಂದ್ರೆ ಮತದಾರರಿಗೆ ಹಣ, ಕುಕ್ಕರ್ ಸೇರಿದಂತೆ ಹಲವು ಆಮಿಷಗಳನ್ನ ಅಭ್ಯರ್ಥಿಗಳು ಕೊಡೋದು ಕಾಮನ್. ಆದ್ರೆ, ಗದಗ ಜಿಲ್ಲೆಯ ರೋಣ ಕ್ಷೇತ್ರದಲ್ಲಿ ಕೊಂಚ ವಿಭಿನ್ನ ಎನ್ನುವಂತೆ ಇಲ್ಲಿನ ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ..

ಚುನಾವಣೆ ಅಂದ್ರೆ ಜಾತ್ರೆ.. ಎಲೆಕ್ಷನ್ ಬಂತು ಅಂದ್ರೆ, ದುಡ್ಡು ಕೊಡೋನು, ಕುಕ್ಕರ್ ಹಂಚೋದು, ಬೇರೆ ಏನೇನೋ ಆಮಿಷ ಇದ್ದೇ ಇರುತ್ತೆ. ದುಡ್ಡು, ಆಮಿಷ ಕೊಡದೇ ಚುನಾವಣೆ ಮಾಡೋದು ಈಗಿನ ಜಮಾನದಲ್ಲಿ ಕಷ್ಟ. ಬೆರಳೆಣಿಕೆ ಕ್ಷೇತ್ರಗಳಲ್ಲಿ ಮಾತ್ರ ಪ್ರಾಮಾಣಿಕ ಚುನಾವಣೆ ಮಾಡೋಕೆ ಕೆಲವರು ಟ್ರೈ ಮಾಡ್ತಾರೆ. ಅಂತ ಪ್ರಾಮಾಣಿಕ ವ್ಯಕ್ತಿ, ರೋಣದ ಎಎಪಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ.

ಯೆಸ್, ರೋಣ ಮತಕ್ಷೇತ್ರ ವ್ಯಾಪ್ತಿಯ ಶಾಂತಗೇರಿ ಮತ್ತು ಸರ್ಜಾಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಅನೇಕ ಕುರಿಗಾಹಿಗಳು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಆನೇಕಲ್‌ ದೊಡ್ಡಯ್ಯ ಅವರ ಚುನಾವಣಾ ವೆಚ್ಚಕ್ಕಾಗಿ 300 ಕುರಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ಈವರೆಗೆ ರೋಣ ಮತಕ್ಷೇತ್ರವನ್ನು ಪ್ರತಿನಿಧಿಸಿದ ಯಾವುದೇ ಶಾಸಕರು ಅಭಿವೃದ್ಧಿಗೆ ಶ್ರಮಿಸಿಲ್ಲ. ಹಾಗಾಗಿ, ಆನೇಕಲ್ ದೊಡ್ಡಯ್ಯ ಮತ್ತು ಆಮ್ ಆದ್ಮಿ ಪಕ್ಷದ ಮೇಲೆ ನಾವು ಭರವಸೆ ಇದ್ದು ಅವರ ಗೆಲುವಿಗಾಗಿ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ 300 ಕುರಿಗಳನ್ನು ಕಾಣಿಕೆ ನೀಡಿದ್ದೇವೆ’ ಎಂದು ಕುರಿಗಾಹಿ ಸಂಘದ ಅಧ್ಯಕ್ಷ ಪಡಿಯಪ್ಪ ಇಟಗಿ ತಿಳಿಸಿದ್ದಾರೆ.

‘ಈ ಕಾಣಿಕೆ ನೀಡಿರುವುದು, ಪ್ರಜಾಪ್ರಭುತ್ವದ ಉಳಿವಿಗೆ ಮತ್ತು ಜನರು ನನ್ನ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಜನತೆಯ ಆಶಯದಂತೆ ಆಯ್ಕೆಯಾಗಿ ಅವರ ಸಮಸ್ಯೆಗಳಿಗೆ ಶಕ್ತಿಮೀರಿ ಸ್ಪಂದಿಸುತ್ತೇನೆ’ ಎಂದು ಆನೇಕಲ್‌ ದೊಡ್ಡಯ್ಯ ಕರ್ನಾಟಕ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಇಟಗಿ ಗ್ರಾಮದ ಮತದಾರರು ಕೂಡ ದೊಡ್ಡಯ್ಯ ಅವರಿಗೆ 25 ಸಾವಿರ ಹಣವನ್ನು ಚುನಾವಣಾ ವೆಚ್ಚಕ್ಕಾಗಿ ನೀಡಿದ್ದರು.

ಸಾಮಾನ್ಯವಾಗಿ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಹಣ, ಬೇರೆ ಬೇರೆ ಆಮಿಷ ಕೊಡ್ತಾರೆ. ಆದ್ರೆ, ಇಲ್ಲಿ ಜನರೇ ರೋಣದ ಎಎಪಿ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಅವರಿಗೆ ಚುನಾವಣಾ ವೆಚ್ಚಕ್ಕಾಗಿ ಹಣದ ಜೊತೆ ಕುರಿಗಳನ್ನ ಕೊಡ್ತಿರೋದು ನಿಜಕ್ಕೂ ವಿಶೇಷ. ಜನರೇ ಚುನಾವಣಾ ವೆಚ್ಚಕ್ಕೆ ಹಣ ಕೊಡ್ತಾರೆ ಅಂದ್ರೆ, ಜನರ ವಿಶ್ವಾಸವನ್ನ ಗಳಿಸೋದ್ರಲ್ಲಿ ಆನೇಕಲ್ ದೊಡ್ಡಯ್ಯ ಯಶಸ್ವಿಯಾಗಿದ್ದಾರೆ ಎಂದೇ ಅರ್ಥ..

ಪೊಲಿಟಿಕಲ್ ಬ್ಯುರೋ, ಕರ್ನಾಟಕ ಟಿವಿ, ರೋಣ..

ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದ ರೇವಣ್ಣ ಕುಟುಂಬ

ಮೀನೂಟದ ಬಗ್ಗೆ ಸ್ಪಷ್ಟನೆ ಕೊಟ್ಟ ಸಿ ಟಿ ರವಿ

ಪಂಚರತ್ನ ರಥಯಾತ್ರೆ ಶಿವಮೊಗ್ಗ

 

- Advertisement -

Latest Posts

Don't Miss