Political News: ಉತ್ತರ ಪ್ರದೇಶದಲ್ಲಿ ಹ್ಯಾರಿಸ್ ಅಲಿ ಎಂಬ 19 ವರ್ಷದ ವೈದ್ಯಕೀಯ ವಿದ್ಯಾರ್ಥಿ, ಐಸಿಸ್ ಜತೆ ಸಂಪರ್ಕದಲ್ಲಿದ್ದು, ಈತನನ್ನು ಬಂಧಿಸಲಾಗಿದೆ.
ಈತ ವಿಧ್ವಂಸಕ ಕೃತ್ಯ ಎಸಗಳು ಸೋಶಿಯಲ್ ಮೀಡಿಯಾ ಬಳಸುತ್ತಿದ್ದ. ಈ ಮೂಲಕ ಭಾರತದಲ್ಲಿ ಐಸಿಸ್ ಪಸರಿಸಲು ಪ್ರತ್ನಿಸಿದ್ದ. ಈತನ ವಿಚಾರಣೆ ನಡೆಸಿದಾಗ, ಈತ ಹೇಳಿದ್ದೇನೆಂದರೆ, ತನಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬದಲಾಗಿ ಷರಿಯಾ ಕಾನೂನಿನ ಮೇಲೆ ನಂಬಿಕೆ ಇದೆ ಎಂಬ ಶಾಕಿಂಗ್ ಸತ್ಯ ಹೇಳಿದ್ದಾನೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಓರ್ವ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ, ಸುಶಿಕ್ಷಿತ ಯುವಕನನ್ನೇ ಭಯೋತ್ಪಾದನೆಗೆ ಇಳಿಯುವಂತೆ ಮಾಡುವ ಮತೀಯ ಪ್ರಲೋಭನೆ ಎಲ್ಲಿಂದ ಬರುತ್ತದೆ? ಭಾರತದಲ್ಲೇ ಹುಟ್ಟಿ ಬೆಳೆದು, ಇಲ್ಲಿನ ಸಕಲ ಸೌಕರ್ಯಗಳನ್ನು ಅನುಭವಿಸಿ, ‘ಗಜ್ವಾ ಎ ಹಿಂದ್’ ಎನ್ನುವ ಭ್ರಾಂತಿಗೆ ತುತ್ತಾಗಿ, ದೇಶಕ್ಕೇ ದ್ರೋಹ ಬಗೆಯುವ ಮನಸ್ಥಿತಿಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಸಮಾಜ, ದೇಶ ಭಾರತದಲ್ಲಿ ಉತ್ತಮ ಜೀವನ ನಡೆಸಲು, ಸರಿಯಾದ ಹಾದಿಯಲ್ಲಿ ಸಾಗಲು ಅವಕಾಶಗಳನ್ನು ಕಲ್ಪಿಸಿಕೊಟ್ಟಾಗಲೂ, ಅದು ಬೇಡ, ಧಾರ್ಮಿಕ ಉಗ್ರವಾದವೇ ಬೇಕು ಎನ್ನುವ ಮನಸ್ಥಿತಿಯವರಿಂದ ಭಾರತವನ್ನು ನಾವು ರಕ್ಷಿಸಿಕೊಳ್ಳಲೇಬೇಕು.
ಇಂದು ನಾವು ಮೈಮರೆತರೆ, ನಾಳೆಯ ದಿನಗಳು ಭೀತಿದಾಯಕವಾಗಿರಲಿವೆ. ಕೇವಲ ಶಿಕ್ಷಣ ಒಂದರಿಂದಲೇ ವ್ಯಕ್ತಿಯನ್ನು ಉತ್ತಮನಾಗಿಸಲು ಸಾಧ್ಯವಿಲ್ಲ.




