Political News: ಬಾಗಲಕೋಟೆ ಬೈ ಎಲೆಕ್ಷನ್: ಗೆದ್ದು ಬೀಗಿದ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ

Political News: ಬಾಗಲಕೋಟೆ ಬೈ ಎಲೆಕ್ಷನ್ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉಮೇಶ್ ಮೇಟಿ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದ ವೀರಣ್ಣ ವಿರುದ್ಧ 22,867 ಮತಗಳ ಅಂತರದಿಂದ ಉಮೇಶ್ ಮೇಟಿ ಗೆಲುವು ಸಾಧಿಸಿದ್ದಾರೆ.

ಉಮೇಶ್ ಮೇಟಿಗೆ 97,941 ಮತಗಳು ಮತ್ತು ವೀರಣ್ಣ ಅವರಿಗೆ 76,075 ಮತಗಳು ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಉಮೇಶ್ ಪರ ಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಉಮೇಶ್ ತಂದೆ ಹೆಚ್.ವೈ.ಮೇಟಿ ಸಾವಿನಿಂದ ಶಾಸಕ ಸ್ಥಾನ ತೆರವಾಗಿತ್ತು. ಹೀಗಾಗಿ ಕಾಂಗ್ರೆಸ್‌ನಲ್ಲಿ ಇರುವ ನಿಯಮದಂತೆ ಮೃತರ ಮಕ್ಕಳಿಗೆ ಅಥವಾ ಅವನ ಕುಟುಂಬದವರಿಗೇ ಟಿಿಕೇಟ್ ನೀಡಬೇಕು ಎಂಬ ನಿಯಮದಂತೆ, ಉಮೇಶ್ ಅವರಿಗೆ ಟಿಕೇಟ್ ನೀಡಲಾಗಿತ್ತು. ಇದೀಗ ಉಮೇಶ್ ಗೆದ್ದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮ ಮನೆ ಮಾಡಿದೆ.

About The Author