Political News: ಸೋಮವಾರ ಮಧ್ಯಾಹ್ನ ಕರ್ನಾಟಕ ಹಾಲು ಮಹಾ ಮಂಡಲ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಮಾತನಾಡಿ “ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ.15 ಲಕ್ಷ ಲೀ ಉತ್ಪಾದನೆ ಆಗುತ್ತಿದ್ದು. ಖಾಸಗಿ ಹಾಲಿನ ಖರೀದಿಯೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ. ಹಾಲಿನ ದರ ಏರಿಕೆಯಿಂದ 11 ಲಕ್ಷ ರೈತ ಕುಟುಂಬಗಳು ಮಾತ್ರವಲ್ಲ 25 ಲಕ್ಷ ಹಾಲು ಮಾರಾಟಗಾರರಿಗೆ ಕೂಡ ಕುಟುಂಬಗಳಿಗೆ ನೆರವಾಗಲಿದೆ ಎಂದು ವಿವರಿಸಿದರು.
ಇತರ ರಾಜ್ಯಗಳಲ್ಲಿ ಹೆಚ್ಚು ದರ
ತಮಿಳುನಾಡು ಸರ್ಕಾರ 12 ರೂ. ಹೆಚ್ಚಿಸಿದೆ. ನಂದಿನಿ ಉತ್ಪನ್ನಗಳು ತಮಿಳುನಾಡು, ಕೇರಳ, ಆಂಧ್ರ ಮಹಾರಾಷ್ಟ್ರ ರಾಜ್ಯಗಳಿಗೆ ಹೋಗುತ್ತಿದೆ. ಆ ರಾಜ್ಯಗಳಲ್ಲಿ ಹಾಲಿನ ಬೆಲೆ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಿದೆ. ಹಾಲಿನ ಪುಡಿ ರಾಷ್ಟ್ರೀಯ ಮಾರುಕಟ್ಟೆಗೆ ತಲುಪುತ್ತದೆ. ಅಮೂಲ್ ಅವರು ಕೂಡ ದರ ಹೆಚ್ಚಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಹಾಲಿನ ದರ ಏರಿಕೆಯಿಂದ ಬಹುಪಾಲು ರೈತರಿಗೆ ನೆರವಾಗಲಿದ್ದು, ಒಕ್ಕೂಟಕ್ಕೆ ಉಳಿಯುವುದು 60 ಪೈಸೆ ಮಾತ್ರ. 20 ಲಕ್ಷ ಲೀ. ಹಾಲು ಹೊರರಾಜ್ಯಗಳಿಗೆ ಹೋಗುತ್ತಿದ್ದು, ನಂದಿನಿ ಹಾಲಿನ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಪ್ರಮಾಣ ಪತ್ರವೂ ದೊರೆತಿದೆ. 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವ ಅವಕಾಶವಿದೆ” ಎಂದರು.




