Wednesday, July 30, 2025

Latest Posts

Political News: ಸಿಎಂ, ಡಿಸಿಎಂ ಆದಮೇಲೆ ಬಿಜೆಪಿಗರಿಗೆ ಅತೀ ಹೆಚ್ಚು ಪ್ರೀತಿ ಇರೋದು ನನ್ನ ಮೇಲೆ: ಪ್ರಿಯಾಂಕ್‌ ಖರ್ಗೆ

- Advertisement -

Political News: ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ಸಿಗರ ಇತಿಹಾಸವನ್ನು ತಿಳಿಯಿರಿ. ನಮ್ಮವರು ಸ್ವಾತಂಂತ್ರಕ್ಕಾಗಿ ಜೈಲಿಗೆ ಹೋಗಿದ್ದಾರೆ. ಬಿಜೆಪಿಗರು ಯಾಕೆ ಜೈಲಿಗೆ ಹೋಗಿದ್ದಾರೆಂದು ತಿಳಿಯಿರಿ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.

ಜನರಿಗೆ ನಮ್ಮ ಇತಿಹಾಸ ತಿಳಿದಿಲ್ಲ. ಬಿಜೆಪಿ- ಆರ್‌ಎಸ್‌ಎಸ್‌ ಅವರಿಗೆ ಅವರ ಇತಿಹಾಸವೇ ತಿಳಿದಿಲ್ಲ. ಬಿಜೆಪಿಗರಿಗೆ ಡಿಕೆಶಿ ಸಾಹೇಬ್ರು, ಸಿದ್ದರಾಮಯ್ಯ ಸಾಹೇಬ್ರು, ಖರ್ಗೆ ಸಾಹೇಬ್ರು ನಂತರ ಹೆಚ್ಚಿನ ಪ್ರೀತಿ ಯಾರ ಮೇಲಾದ್ರೂ ಇದ್ರೆ ಅದು ನನ್ನ ಮೇಲೆ ಎಂದು ಪ್ರಿಯಾಂಕ್ ಖರ್ಗೆ ತಮಾಷೆ ಮಾಡಿದ್ದಾರೆ.

ಪಂಡಿತ್ ಜವಹರ್‌ಲಾಲ್ ನೆಹರು ಅವ್ರಿಗೆ ಪಂಡಿತ್ ಅನ್ನೋ ಹೆಸರು ಯಾರು ನೀಡಿದ್ದೆಂದು ನಮಗೆ ತಿಳಿದಿದೆ. ಸುಭಾಷ್ ಚಂದ್ರ ಬೋಸ್, ಮಹಾತ್ಮಾಗಾಂಧಿ ಅವರಿಗೆ ಬಿರುದುಗಳನ್ನು ನೀಡಿದ್ಯಾರೆಂದು ನಮಗೆ ತಿಳಿದಿದೆ. ಆದರೆ ವೀರ್ ಸಾವರ್ಕರ್‌ಗೆ ವೀರ್ ಅನ್ನೋ ಬಿರುದು ನೀಡಿದ್ದು ಯಾರು ಎಂದು ನಾನು ಸದನದಲ್ಲಿ ಕೇಳಿದೆ. ಅವರ ಬಳಿ ಉತ್ತರವೇ ಇರಲಿಲ್ಲ. ಏಕೆಂದರೆ ಆ ಬಿರುದನ್ನು ಅವರಿಗೆ ಅವರೇ ಕ“ಟ್ಟಿಕ“ಂಡಿದ್ದು ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.

ಅಲ್ಲದೇ ನಾವು ಬಿಜೆಪಿ ಯೋಜನೆ ಬಗ್ಗೆ, ಅಭಿವೃದ್ಧಿ ಬಗ್ಗೆ ಕೇಳಿದರೆ, ಆರ್‌ಎಸ್‌ಎಸ್‌ ಬಗ್ಗೆ ಕೇಳಿದರೆ, ಅವರ ತತ್ವ ಸಿದ್ಧಾಂತವನ್ನು ಪ್ರಶ್ನಿಸಿದರೆ ನಮ್ಮನ್ನು ದೇಶದ್ರೋಹಿ ಎನ್ನುತ್ತಾರೆ. ದೇಶಭಕ್ತಿ ಸರ್ಟಿಫಿಕೇಟ್ ನೀಡುವವರು ಈ ಮುಂಚೆ ಎಲ್ಲಿದ್ದರು..? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ. ಈ ಹಿಂದಿನ ಪ್ರಮುಖ ಹೋರಾಟದಲ್ಲಿ ಬಿಜೆಪಿಗರು ಎಲ್ಲಿದ್ದರು..? ಈ ಹಿಂದೆ ಪಾಕಿಸ್ತಾನ ವಿಭಜನೆಯಾಗುವ ಸಂದರ್ಭದಲ್ಲಿ ಇವರೆಲ್ಲ ಎಲ್ಲಿದ್ದರು ಎಂದು ಪ್ರಿಯಾಂಕ್ ಪ್ರಸ್ನಿಸಿದ್ದಾರೆ.

ನೀವು ಇಡೀ ಭಾರತದಲ್ಲಿ ಮಾತ್ರವಲ್ಲ, ವಿದೇಶಕ್ಕೆ ಹೋದರೂ ನಿಮಗೆ ಗಾಂಧೀಜಿಯವರ ಪ್ರತಿಮೆ ಕಾಣಸಿಗುತ್ತದೆ. ಆದರೆ ಬಿಜೆಪಿಗರಿಗೆ ಗಾಂಧೀಜಿಯವರ ಪ್ರತಿಮೆ ಬೇಡ, ಗೋಡ್ಸೆಯವರ ಪ್ರತಿಮೆ ಬೇಕಾಗಿದೆ. ಹಾಗಾದ್ರೆ ಗಾಂಧೀಜಿ ಹತ್ಯೆ ಮಾಡಿರುವ ಗೋಡ್ಸೆ ದೇಶಭಕ್ತರಾದರೆ, ಗಾಂಧೀಜಿಯವರು ಯಾರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸುವ ಮೂಲಕ ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

Latest Posts

Don't Miss