Political News: ಹೆಸರು ಬದಲಾದರೆ ಸಾಲದು, ಬೆಂಗಳೂರಿನ ಹಣೆಬರಹ ಬದಲಾಗಲಿ!: ನಿಖಿಲ್ ಕುಮಾರ್

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್, ಗ್ರೇಟರ್ ಬೆಂಗಳೂರು ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಸದ ಸಮಸ್ಯೆ ಹೆಚ್ಚಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದಿರುವ ಅವರು, ಬೆಂಗಳೂರನ್ನು “ಗ್ರೇಟರ್” ಎಂದು ಕರೆದ ತಕ್ಷಣ ಅದು ಸುಂದರವಾಗುವುದಿಲ್ಲ, ಮಾನ್ಯ ಉಪ ಮುಖ್ಯಮಂತ್ರಿಗಳೇ. ಇಂದು ನಗರದ ಪ್ರತಿ ಮೂಲೆಯಲ್ಲೂ ಕಸದ ಅರಮನೆಗಳೇ ನಿರ್ಮಾಣವಾಗಿವೆ! ದೇಶದ ಎರಡನೇ ಅತಿ ಶ್ರೀಮಂತ ಮಹಾನಗರ ಪಾಲಿಕೆಯಾದ GBAಯ ಸಾರಥಿಗಳಾದ ನೀವು ನಗರದ ಸ್ಥಿತಿಯನ್ನು ಹೇಗೆ “ಅದ್ಭುತವಾಗಿ” ಹಾಳು ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳೇ ಸಾರುತ್ತಿವೆ. ಕುರ್ಚಿಯ ಆಟ ಬಿಟ್ಟು ಬೀದಿಗೆ ಬಂದು ನೋಡಿ. ರೋಗಗಳು ಉಲ್ಬಣಗೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ. ಕೇವಲ ಬ್ರಾಂಡ್ ಬೆಂಗಳೂರು ಎಂಬ ಘೋಷಣೆ ಬೇಡ, ಸ್ವಚ್ಛ ಬೆಂಗಳೂರು ಮೊದಲು ಬೇಕಾಗಿದೆ ಎಂದು ನಿಖಿಲ್ ಹೇಳಿದ್ದಾರೆ.

About The Author