Political News: ಸಿಎಂ ಸಿದ್ದರಾಮಯ್ಯ, ಎಡಿಷನಲ್ ಚೀಫ್ ಸೆಕ್ರೆಟರಿ ಅಂಜುಮ್ ಫರ್ವೇಜ್ ಮತ್ತು ಸಚಿವರಾದ ಕೃಷ್ಣ ಭೈರೇಗೌಡ ಮೂವರು ಸೇರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಭೇಟಿಯಾಗಿದ್ದಾರೆ.
ಸದ್ಯ ನವದೆಹಲಿಗೆ ದೌಡಾಯಿಸಿರುವ ಸಿದ್ದು ಟೀಂ, ಪ್ರಧಾನಿ ಬಳಿ ಯಾವ ವಿಷಯದ ಬಗ್ಗೆ ಚರ್ಚಿಸಿದರು ಅನ್ನೋ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಸಿಎಂ ಆ ಬಗ್ಗೆ ಮಾತನಾಡಿದ್ದು, ಯಾವ ವಿಷಯದ ಬಗ್ಗೆ ಚರ್ಚಿಸಿದ್ದಾರೆಂದು ಹೇಳಿದ್ದಾರೆ.
ನಾವು 5 ವಿಷಯಗಳ ಬಗ್ಗೆ ಪಿಎಂ ಬಳಿ ಚರ್ಚಿಸಿದ್ದೇವೆ. ಈ ವರ್ಷ ಮುಂಗಾರಿನಲ್ಲಿ ಮುಂಚಿತವಾಗಿಯೇ ಮಳೆ ಪ್ರಾರಂಭವಾಯ್ತು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಯ್ತು. ಹೀಗಾಗಿ ಕರ್ನಾಟಕದಲ್ಲಿ 14 ಲಕ್ಷದ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಜಂಟಿ ಸರ್ವೆಯಾಗಿದ್ದು, ಸುಮಾರು 3 ಸಾವಿರದ 550 ಕೋಟಿ ನಷ್ಟ ಉಂಟಾಗಿದೆ. ನಮ್ಮ ಬಳಿ 984 ಕೋಟಿ ಇದೆ. ನಮಗೆ ಈಗ 614 ಕೋಟಿ ಬೇಕು. ಅದಕ್ಕೆ ಪ್ರಧಾನಿಗೆ ಮೆಮೋರಾಂಡಮ್ ನೀಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ರಾಜ್ಯದ ಅತಿವೃಷ್ಟಿ ಪರಿಸ್ಥಿತಿಯ ನಿರ್ವಹಣೆಯ ಬಗ್ಗೆ ಪ್ರಧಾನಿ @narendramodi ಅವರಲ್ಲಿ ನಾನು ಕೇಳಿದ್ದು.. pic.twitter.com/FxUqyljXv4
— Siddaramaiah (@siddaramaiah) November 17, 2025
ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿಗಳಾದ @narendramodi ಅವರಲ್ಲಿ ನಾನು ಕೇಳಿದ್ದು.. pic.twitter.com/xtrbJsPrF1
— Siddaramaiah (@siddaramaiah) November 17, 2025
ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಕುರಿತು ಪ್ರಧಾನಿಗಳಾದ @narendramodi ಅವರಲ್ಲಿ ನಾನು ಕೇಳಿದ್ದು.. pic.twitter.com/CbuEIKTUlj
— Siddaramaiah (@siddaramaiah) November 17, 2025
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಪ್ರಧಾನಿ @narendramodi ಅವರಿಗೆ ಮನವಿ ಸಲ್ಲಿಸಿದ್ದೇನೆ. pic.twitter.com/yYcg0RHlMU
— Siddaramaiah (@siddaramaiah) November 17, 2025

