Political News: ರಾಮನಗರದಲ್ಲಿ ಬೀದಿಗೆ ಬಂದ ಕಾಂಗ್ರೆಸ್ ಒಳಜಗಳ: ಶಾಸಕ ಇಕ್ಬಾಲ್ ಹುಸೇನ್‌ಗೆ ಮುಜುಗರ..!

Political News: ನಗರಸಭಾ ಜೆಡಿಎಸ್ ಕೌನ್ಸಲರ್ ಗ್ಯಾಬ್ರಿಯಲ್ ರವರು ಸ್ಥಳೀಯರ ಸಮಸ್ಯೆಯನ್ನು ಕೇಂದ್ರ ಸಚಿವರ ಬಳಿ ಹೇಳಿಕೊಳ್ಳುತ್ತಿದ್ದರು . ಈ ವೇಳೆ ಎಂಎಲ್‌ಎ ಇಕ್ಬಾಲ್ ಹುಸೇನ್ ಅವರು ಕೌನ್ಸಿಲರ್ ಬಳಿ ಏಕವಚನದಲ್ಲಿ ಮಾತನಾಡಿರುವ ಘಟನೆ ನಡೆದಿದೆ.

ಈ ವೇಳೆ ಅಲ್ಲೇ ಇದ್ದ ನಗರಸಭಾ ಅಧ್ಯಕ್ಷರಾದ ಶಶಿ ರವರು ಕೌನ್ಸಿಲರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕರ ಪರ ನಿಂತು ಕೇಂದ್ರ ಸಚಿವರ ಬಳಿ ಮಾತನಾಡಿದ್ದಾರೆ. ಈ ವೇಳೆ ಇಕ್ಬಾಲ್ ಹುಸೇನ್ ಮುಜುಗರಕ್ಕೆ ಒಳಗಾಗಿದ್ದು, ರಾಮನಗರದಲ್ಲಿ ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದೆ.

ಇನ್ನು ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರು ರಸ್ತೆ ಬಗ್ಗೆ ಮಾತನಾಡಲು ಮುಂದಾದಾಗ, ಸಾರ್ವಜನಿಕರು ಸಚಿವರಿಗೆ ಮಾತನಾಡಲು ಅವಕಾಶ ನೀಡದೇ, ತಮ್ಮದೇ ವಾದ ಮುಂದುವರಿಸಿದರು. ಸದ್ಯ ಈ ವೀಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಮುಜುಗರ ಪಡುವ ಪರಿಸ್ಥಿತಿ ತಂದಿದೆ.

About The Author