Saturday, July 27, 2024

Latest Posts

Political News: ಸೋಲಿಗೆ ಇದೇ ಕಾರಣ ಎಂದ ಡಿ.ಕೆ.ಸುರೇಶ್!

- Advertisement -

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಡಾ.ಮಂಜುನಾಥ್ ವಿರುದ್ಧ ಸೋತಿರೋದು ಈಗ ಹಳೆ ವಿಷಯ.. ಆದರೆ ಈಗ ಡಿಕೆ ಸುರೇಶ್ ಈ ಸೋಲಿನ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳುತ್ತಿದ್ದಾರೆ. ನನಗೆ ಯಾರೂ ಶತ್ರುಗಳಿಲ್ಲ, ನನಗೆ ನಾನೇ ಶತ್ರು, ಜನ ನನಗೆ ವಿರಾಮ ಕೊಟ್ಟಿದಾರೆ, ಅದನ್ನ ನಾನು ಒಪ್ಪಿಕೊಳ್ಳುತ್ತೇನೆ. ಈ ಸೋಲು ನನ್ನ ವೈಯಕ್ತಿಕ ಸೋಲು, ಇದಕ್ಕೆ ನಾನೇ ಹೊಣೆ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಸೋಮವಾರ ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯನ್ನ ಉದ್ದೇಶಿಸಿ ಡಿಕೆ ಸುರೇಶ್ ಮಾತನಾಡಿ.. ಕಳೆದ 10ವರ್ಷ 8ತಿಂಗಳ ಕಾಲ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಎಲ್ಲರೂ ಸಹಕಾರ ಮತ್ತು ಪ್ರೋತ್ಸಾಹ ಕೊಟ್ಟಿದ್ದಾರೆ. ನಾನು ರಾಜಕೀಯಕ್ಕೆ ಬರಬೇಕು ಅಂತ ಬಂದವನಲ್ಲ, ರಾಜಕೀಯ ಆಸಕ್ತಿಯೂ ನನಗಿರಲಿಲ್ಲ. ಆದರೆ ಉಪ ಚುನಾವಣೆಯಲ್ಲಿ ರಾಜ್ಯದ ನಾಯಕರು ಮತ್ತು ಮುಖಂಡರು ಚುನಾವಣೆ ಮಾಡಿ ಗೆಲ್ಲಿಸಿದರು ಎಂದು ತಿಳಿಸಿದರು.

ನನಗೆ ರಾಜಕೀಯ ಆಸಕ್ತಿ ಇರಲಿಲ್ಲ, ರಾಜಕಾರಣಕ್ಕೆ ಬರಬೇಕು ಅಂತ ನಾನು ಬಂದವನಲ್ಲ. ರಾಜ್ಯದ ನಾಯಕರ ಒತ್ತಾಯದ ಮೇರೇಗೆ ರಾಜಕಾರಣಕ್ಕೆ ಬಂದು ಗೆದ್ದೆ, ಆದರೆ ಈಗ ಸೋತಿದ್ದೇನೆ. ಈ ಸೋಲನ್ನ ಸಂತೋಷದಿಂದ ಒಪ್ಪಿದ್ದೇನೆ, ಜನರ ತೀರ್ಪನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಇದುವರೆಗೆ 3ಲೋಕಸಭಾ ಚುನಾವಣೆಯಲ್ಲಿ ನಾನು ಗೆದ್ದು ಕ್ಷೇತ್ರದ ಜನರ ಸೇವೆ ಮಾಡಿದ್ದೇನೆ. ನಾನು ಸಂಸದನಾಗಿದ್ದಾಗ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಕೇಂದ್ರ-ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನ ಮನೆ-ಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ ಎನ್ನುವ ಆತ್ಮ ತೃಪ್ತಿ ನನಗಿದೆ. ನಾನು ಮಾಡಿದ ಕೆಲಸ ಕಾರ್ಯಗಳನ್ನ ಜನರ ಮುಂದಿಟ್ಟು ಚುನಾವಣೆಗೆ ಹೋದೆ. ಕನ್ನಡಿಗರ ಪರವಾಗಿ ಗಟ್ಟಿ ಧ್ವನಿ ಎತ್ತಿ ಟೀಕೆಗೂ ಒಳಗಾದೆ. ಕರ್ನಾಟಕದ ತೆರಿಗೆ ಹಣದ ವಿಚಾರವಾಗಿ ಹೋರಾಟ ಮಾಡಿದೆ. ನಾನು ಮತ ಕೇಳುವ ಸಂದರ್ಭದಲ್ಲಿ ನನ್ನ ಕೆಲಸಕ್ಕೆ ಕೂಲಿ ಕೊಡಿ ಅಂತ ಚುನಾವಣೆಗೆ ಬಂದೆ ಆದರೆ ಜನ ಅದನ್ನ ತಿರಸ್ಕಾರ ಮಾಡಿದ್ದಾರೆ ಎಂದು ಹೇಳುತ್ತಾ ಸುರೇಶ್ ಭಾವುಕರಾದರು.

ಇದು ಬಿಜೆಪಿ – ಜೆಡಿಎಸ್ ಗೆಲುವಲ್ಲ. ಇದು ಜಾತಿ-ಧರ್ಮ, ಭಾವನೆ, ಅಸೂಯೆಯ ಗೆಲುವು. ರಾಜಕಾರಣದಲ್ಲಿ ಜಾತಿ ಧರ್ಮ ಇಷ್ಟೊಂದು ಪ್ರಮುಖ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ರಾಜಕೀಯ ಜೀವನದಲ್ಲಿ ನಾನು ಬದುಕಬೇಕು, ಬಾಳಬೇಕು, ನನ್ನ ಕೆಲಸಾನೂ ನೀವು ನೋಡಬೇಕು. ಯಾರ್ ಯಾರು ಏನೆಲ್ಲಾ ಮಾಡಿದ್ದಾರೆ ಅನ್ನೋದನ್ನ ದೇವರು ನೋಡ್ಕೋತಾನೆ ಎಂದು ಖಡಕ್ ಆಗಿ ನುಡಿದ ಸುರೇಶ್ ಅಂತಿಮವಾಗಿ ತಮ್ಮ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

Political News: ಕಾರ್ಯಕರ್ತರ ಮುಂದೆ ಭಾವುಕರಾದ ಡಿ.ಕೆ.ಸುರೇಶ್

Sandalwood News: ಯುವ ರಾಜ್​ಕುಮಾರ್ ವಿಚ್ಛೇದನ- ಪತ್ನಿ ಶ್ರೀದೇವಿ ಸ್ಫೋಟಕ ಹೇಳಿಕೆ

ನಾವು ಸೋತರೂ ಒಳ್ಳೆ ಫೈಟ್ ಕೊಟ್ಟಿದ್ದೇವೆ: ಕಾಂಗ್ರೆಸ್ ಸೋಲಿನ ಬಗ್ಗೆ ಸಂತೋಷ್ ಲಾಡ್ ಮಾತು

- Advertisement -

Latest Posts

Don't Miss