Political News: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ್ದು, ಈಗ ಬಿಹಾರದಲ್ಲಿ ಸಿಎಂ ಆಗೋದ್ಯಾರು ಎಂಬ ಪ್ರಶ್ನೆ ಎದುರಾಗಿದೆ.
ಬಿಹಾರದಲ್ಲಿ 9 ಬಾರಿ ನಿತೀಶ್ ಕುಮಾರ್ ಅವರೇ ಸಿಎಂ ಆಗಿದ್ದರು. ಈಗಲೂ ಅವರೇ ಸಿಎಂ ಆಗುತ್ತಾರೆ ಅಂತಲೇ ಹೇಳಲಾಗುತ್ತಿತ್ತು. ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದ ಕಾರಣ, ಈಗ ಬಿಜೆಪಿಯಿಂದಲೇ ಯಾರನ್ನಾದರೂ ಸಿಎಂ ಆಗಿ ಮಾಡುತ್ತಾರೆಂಬ ಮಾತು ಕೇಳಿ ಬರುತ್ತಿದೆ.
ಹಾಗಾದ್ರೆ ಬಿಜೆಪಿಯವರನ್ನೇ ಸಿಎಂ ಮಾಡುವುದಾದರೆ, ಈ ಹಿಂದೆ ಡಿಸಿಎಂ ಆಗಿದ್ದ ಸಾಮ್ರಾಟ್ ಚೌಧರಿ ಅವರನ್ನೇ ಸಿಎಂ ಮಾಡಬಹುದು ಅಂತಾ ಅಂದಾಜು ಮಾಡಲಾಗುತ್ತಿದೆ. ಸಾಮ್ರಾಟ್ ಉತ್ತಮ ರಾಜಕಾರಣಿಯಾಗಿದ್ದು, ಸಿಎಂ ಆದರೆ ಬಿಹಾರ ರಾಜ್ಯದ ಅಭಿವೃದ್ಧಿ ಉತ್ತಮವಾಗಿರುತ್ತದೆ ಅಂತಾ ಹೇಳಲಾಗಿದೆ.
ಇನ್ನು ಈ ಸಂದೇಹ ಬರಲು ಕಾರಣವೇನೆಂದರೆ, ಜೆಡಿಯು ಪಕ್ಷವು ಕೆಲ ಸಮಯಕ್ಕೆ ಮುಂಚೆ ಬಿಹಾರಕ್ಕೆ ನಿತೀಶ್ ಕುಮಾರ್ ಹಿಂದೆಯೂ ಸಿಎಂ ಮುಂದೆಯೂ ಸಿಎಂ ಎಂದು ಎಕ್ಸ್ ಖಾತೆಯಲ್ಲಿ ಬರೆದಿತ್ತು. ಆದರೆ ಸ್ವಲ್ಪ ಸಮಯದ ಬಳಿಕ ಆ ಪೋಸ್ಟ್ ಡಿಲೀಟ್ ಆಗಿತ್ತು. ಹೀಗಾಗಿ ಈ ಬಾರಿ ನಿತೀಶ್ ಸಿಎಂ ಆಗೋದು ಡೌಟ್ ಎನ್ನಲಾಗಿದೆ.


