Political News: ರಾಜ್ಯ ಸರ್ಕಾರಕ್ಕೆ ಹಣಕಾಸು ಇಲಾಖೆ ಎಚ್ಚರಿಕೆ: ಕಾಂಗ್ರೆಸ್ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ

Political News: ರಾಜ್ಯ ಸರ್ಕಾರ ನೂತನ ಯೋಜನೆಗಳನ್ನು ಘೋಷಿಸುವ ಮುನ್ನ ಆರ್ಥಿಕ ಸ್ಥಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹಣಕಾಸು ಇಲಾಖೆ ಕರೆ ನೀಡಿದೆ.

ಈ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಕಳ ಶಾಸಕ ಸುನೀಲ್ ಕುಮಾರ್,ಕಾಂಗ್ರೆಸ್ ಸರ್ಕಾರ ಪ್ರಚಾರ ಬಿಟ್ಟು , ಆರ್ಥಿಕ ಶಿಸ್ತನ್ನು ತೋರಿಸಲಿ ಎಂದು ಆಗ್ರಹಿಸಿದ್ದಾರೆ.

ಆರ್ಥಿಕ ಇಲಾಖೆ ನೀಡಿರುವ ಈ ಎಚ್ಚರಿಕೆ ಕಾಂಗ್ರೆಸ್ ಸರ್ಕಾರದ ಆಡಳಿತದ ಅಸಲಿ ಚಿತ್ರಣವನ್ನು ಬಯಲು ಮಾಡಿದೆ! ದಿನಬೆಳಗಾದರೆ ಹಣಕಾಸು ಮೂಲ ತಿಳಿಸದೇ ಸಾವಿರಾರು ಕೋಟಿ ರೂ. ಯೋಜನೆ ಘೋಷಣೆ ಮಾಡುತ್ತಿದ್ದ ಮುಖ್ಯಮಂತ್ರಿ ಕಚೇರಿಗೆ ಹೊಸ ಯೋಜನೆ ಘೋಷಿಸುವ ಮುನ್ನ ಹೊಸ ಆದಾಯದ ಮೂಲ ಹುಡುಕಬೇಕು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.

ಇದು ಸರ್ಕಾರದ ಆರ್ಥಿಕ ಅಶಿಸ್ತು ಹಾಗೂ ದಿವಾಳಿತನಕ್ಕೆ ಸಾಕ್ಷಿ. ರಾಜ್ಯದ ಬಾಕಿ ಹೊಣೆಗಾರಿಕೆ GSDPಯ 24.94%ಕ್ಕೆ ತಲುಪಿದೆ. ಕಾಮಗಾರಿಗಳ ಬಿಲ್‌ಗಳು ಬಾಕಿ, ಸಾವಿರಾರು ಕೋಟಿ ಪಾವತಿಗಳು ಬಾಕಿ, ವೇತನ–ಸಬ್ಸಿಡಿಗಳ ಹೊರೆ ಇದೆ. ಆದರೂ ರಾಜಕೀಯ ಘೋಷಣೆಗಳಿಗೆ ಮಾತ್ರ ಡಿ.ಕೆ.ಶಿವಕುಮಾರ್ ಸರ್ಕಾರ ಉತ್ಸಾಹ ತೋರುತ್ತಿದೆ. ಕಾಂಗ್ರೆಸ್ ಸರ್ಕಾರ ಪ್ರಚಾರ ಬಿಟ್ಟು , ಆರ್ಥಿಕ ಶಿಸ್ತನ್ನು ತೋರಿಸಲಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

About The Author