Mandya News: ಮಂಡ್ಯದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಮೊದಲಿಂದಲೂ ನಾನು ಹೇಳ್ತಿದ್ದೇನೆ ಜಿಲ್ಲಾಧಿಕಾರಿ ಜಾಗ ಹುಡುಕ್ತಿದ್ದಾರೆ. ಇನ್ನು ಕೂಡ ಜಾಗ ಗುರುತು ಮಾಡಿಲ್ಲ. ಶಾಸಕರು ಬಸರಾಳು ಅಂತಾರೆ, ಅದು ಫಾರೆಸ್ಟ್ ಲ್ಯಾಂಡ್ ಆಗಿದೆ. ಸ್ವತಃ ಡಿಸಿ ಅವರೇ ಹೇಳಿದ್ದಾರೆ. ಶಾಸಕರು ಏನು ವಿಡಿಯೋದಲ್ಲಿ ತೋರಿಸ್ತಾರಾ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನನಗೆ ಜಾಗ ತೋರಿಸಬೇಕಿಲ್ಲ, ಸರ್ಕಾರದಿಂದ ಎಂಬಿ ಪಾಟೀಲ್ ಗೆ ಹೇಳಿ ಅಕ್ವೇರ್ ಮಾಡಿಸಿಕೊಡಲಿ. ಕಂಪನಿಯವರು ಹುಡುಕೊಂಡು ಬರಲ್ಲ. ನಾವೇ ಕಂಪನಿಯ ಹುಡುಕಿಕೊಂಡು ಹೋಗಿವ ಪರಿಸ್ಥಿತಿಗೆ ಬಂದಿದ್ದೇವೆ. ಆಂಧ್ರಪ್ರದೇಶದಲ್ಲಿ ಸ್ಟೀಲ್ ಪ್ಲಾಂಟ್ ಬೀಗ ಹಾಕ್ಸಿದ್ರು ಓಪನ್ ಮಾಡಿಸಿದ್ದೇನೆ. HMT ಗೆ ಜೀವ ಕೊಟ್ಟಿದ್ದೇನೆ. ನೀವು ಏನು ತಂದಿರುವುದು ಏನಿದೆ? ಮೊದಲು ಜಾಗ ಕೊಡಲಿ ನನಗೆ ಏನು ಮಾಡಬೇಕು ಅಂತ ಗೊತ್ತಿದೆ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚಿಲ್ಲರೆ ರಾಜಕೀಯ ಮಾಡೋದನ್ನ ನಿಲ್ಲಿಸಿ. ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ. ಮೈಶುಗರ್ ಶಾಲೆಗೆ 13 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಕುಮಾರಸ್ವಾಮಿ ಮಾಡಿಲ್ಲ ಅಂತ ಕೀಳು ಮಟ್ಟದ ಮಾತುಗಳು ಸರಿಯಲ್ಲ.
ನಿಮ್ಮ ಯೋಗ್ಯತೆಗೆ ಸರ್ಕಾರದಲ್ಲಿ ದುಡ್ಡಿಲ್ಲ. 400ಕೋಟಿ ಕೊಟ್ಟಿದೆ 100ಕೋಟಿ ಇಟ್ಟಿದ್ದ ದುಡ್ಡು ಎಲ್ಲಿ?
CSR 33 ಕೋಟಿ ಬಿಡುಗಡೆ, ಅದರಲ್ಲಿ ಮಂಡ್ಯಕ್ಕೆ 11 ಕೋಟಿ ಕೊಟ್ಟಿದ್ದೇನೆ. ನನದು ಇಷ್ಟಾದ್ರು ಇದು ಇವರದು ಏನು ಕೊಡುಗೆ ಇದೆ? ಇವರ ಯೋಗ್ಯತೆಗೆ ಬೆಂಗಳೂರು ವಿವಿ 65 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಕೇಂದ್ರ ಸಚಿವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡ್ರು ಹೆಸರಲ್ಲಿ ರಾಜಕೀಯ ಅಂತಾರೆ . ನಾನು ಕಮಿಷನ್ ಪಡೆಯಲ್ಲ, ತೆರದ ಪುಸ್ತಕ. ಚುನಾವಣೆ ಬಂದಾಗ ನೋಟ್ ಪ್ರಿಂಟ್ ಮಾಡ್ತಿನಾ? ಇವರು ಪ್ರಿಂಟ್ ಮಾಡ್ತಾರಾ? ನನ್ನದು ಸಣ್ಣ ಪಾರ್ಟಿ ಕಟ್ಟಬೇಕು. ಭಿಕ್ಷೆ ಬೇಡ್ತಿನಿ. ಪ್ರತಿದಿನ ಸಹಿ ಹಾಕಲು ಇವರತರ ಕೆಲಸ ನನ್ನ ಜೀವನದಲ್ಲಿ ಮಾಡಿಲ್ಲ. ಚುನಾವಣೆಯಲ್ಲಿ ಜನರು ಕೊಡ್ತಾರೆ ಅಷ್ಟೆ. ಡೆಲ್ಲಿಲಿ ಬಂದು ನೋಡಲಿ ಏನು ಅಂತ. ನಾನು ಕಲ್ಲಿನ ಮನೆ ಕಟ್ಟಿದ್ದಿನಾ? ನಾನು ಸಿಎಂ ಆಗಿದ್ದಾಗಾ ಏನು ಕೊಟ್ಟಿದಿನಿ ನೋಡಲಿ. ಕೊಟ್ಟ ಮಾತನ್ನ ಅವರೊಬ್ಬರೆ ಉಳಿಸಿಕೊಂಡಿದ್ದಾರೆ. ಮುಂದೆ ಜನರೇ ಉತ್ತರ ಕೊಡ್ತಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ರಾಾಜ್ಯ ಸರ್ಕಾರದ ಆರೋಪದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

