Political news: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ನಿರ್ಣಯ ಕೈಗೋಂಡರೂ,ಅದಕ್ಕೆ ನಮ್ಮ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಇಂದು ಸುದ್ದಿಗೋಷ್””ಿ ನಡೆಸಿ ಮಾತನಾಡಿರುವ ಅವರು, ಕಾಶ್ಮೀರ ದಾಳಿ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ನಿರ್ಣಯಗಳನ್ನು ತೆಗೆದುಕಂಡಿದೆ. ಇದೇ ಮೋದಲ ಬಾರಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರು ಈ ಕೃತ್ಯವನ್ನು ಪಾಕಿಸ್ತಾನದ ಬೆಂಬಲದಿಂದ ಮಾಡಿದ್ದೆಂಬ ಸುದ್ದಿ ಇದೆ. ಇಡೀ ದೇಶದ ಜನರು ಪ್ರಧಾನಿ ಮೋದಿ ಅವರು ತೆಗೆದುಕ“ಳ್ಳುವ ನಿರ್ಧಾರಕ್ಕೆ ಬೆಂಬಲ ನೀಡಬೇಕು ಎಂದಿದ್ದಾರೆ.
ನಾನು ರಾಜಕೀಯ ಪಕ್ಷದ ನಾಯಕನಾಗಿ ಹೇಳುತ್ತೇನೆ, ಪ್ರಧಾನಿ ಮೋದಿ ಅವರು ತೆಗೆದುಕ“ಳ್ಳುವ ಎಲ್ಲ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಪ್ರಧಾನಿ ಮೋದಿಯವರು ನನಗೆ ಕರೆ ಮಾಡಿಲ್ಲ,. ಮಾಡುವ ಅವಶ್ಯಕತೆಯೂ ಇಲ್ಲ. ಅವಶ್ಯಕತೆ ಬಿದ್ದರೆ ನಾನೇ ಮೋದಿಯವರಿಗೆ ಪತ್ರ ಬರೆಯುತ್ತೇನೆ. ಅನೇಕ ಸಂದರ್ಭದಲ್ಲಿ ನಾನು ಮೋದಿಯವರಿಗೆ ಪತ್ರ ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ. ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಮೋದಿ ಮತ್ತು ನನ್ನ ಸಂಬಂಧ ಇಂದು ನಾಳೆಯದ್ದಲ್ಲ. ನನ್ನ ಜೀವನದ ಕ“ನೆಯ ಘ”್”ದಲ್ಲಿ ಈ ನಿರ್ಣಯ ಮಾಡಿದ್ದೇನೆ ಎಂದು ದೇವೇಗೌಡರು ಹೇಳಿದ್ದಾರೆ.
ಇನ್ನು ಸಿಂಧು ನದಿ ನೀರನ್ನು ಪಾಕಿಸ್ತಾನಕ್ಕೆ ಹೋಗದಂತೆ ತಡೆಯುವ ವಿಚಾರದ ಬಗ್ಗೆ ಮತ್ತು ಯುದ್ಧದ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡರು, ಯುದ್ಧ ಮಾಡುವ ಸನ್ನಿವೇಶ ಬಂದರೆ, ಆ ಬಗ್ಗೆ ಪ್ರಧಾನಿ ಮೋದಿ ನಿರ್ಧಾರ ತೆಗೆದುಕಳ್ಳುತ್ತಾರೆ. ವಿಶ್ವದ ಹಲವು ನಾಯಕರು ಪ್ರಧಾನಿ ಮೋದಿ ಅವರಿಗೆ ಬೆಂಬಲವಾಗಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.