Political News: ಬಾಳೆಹ“ನ್ನೂರಿನಿಂದ ಕಳಸಕ್ಕೆ ಹೋಗುವ ದಾರಿಮಧ್ಯೆ, ಹ“ರನಾಡಿಗೆ ಹೋಗುವಾಗ ಕಾಲಭೈರವ ದೇವಸ್ಥಾನದ ಸಮೀಪ ಬರುತ್ತಿದ್ದಂತೆ, ಕೆಎಸ್ಆರ್ಟಿಸಿ ಬಸ್ ಮುಂಭಾಗದ ಚಕ್ರ ಕಳಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವೈಜ್ಞಾನಿಕವಾಗಿ ಜಾರಿಗೆ ತಂದ ಶಕ್ತಿ ಯೋಜನೆಯ ಪರಿಣಾಮವಾಗಿ, ಕೆಎಸ್ಆರ್ಟಿಸಿ ಸಂಪೂರ್ಣವಾಗಿ ನಿಶ್ಶಕ್ತಿಗೊಂಡಿದೆ. ಬೆಂಗಳೂರು, ಮತ್ತಿತರ ಪ್ರದೇಶಗಳಲ್ಲಿ ಓಡಿ ಹಳೆಯದಾಗಿರುವ ಬಸ್ಸುಗಳನ್ನು ಚಿಕ್ಕಮಗಳೂರಿನಂತಹ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕಾಡಿನಿಂದ ಆವೃತವಾಗಿರುವ ಜಿಲ್ಲೆಯಾಗಿದ್ದು, ಆನೆ ಕಾಟ ಇರುವಂತಹ ಪ್ರದೇಶದಲ್ಲಿ ಬಸ್ಸುಗಳು ಹಾಳಾದರೆ ಅದರಿಂದ ಎದುರಾಗಬಲ್ಲ ಅಪಾಯಕ್ಕೆ ಹೊಣೆ ಯಾರು? ಎಂದು ರವಿ ಪ್ರಶ್ನಿಸಿದ್ದಾರೆ.
ಕೆಎಸ್ಆರ್ಟಿಸಿ ಈಗಾಗಲೇ ಅಪಾರ ನಷ್ಟದಲ್ಲಿದ್ದು, ಹೊಸ ಬಸ್ಸುಗಳನ್ನು ಖರೀದಿಸುವುದೂ ಅಸಾಧ್ಯವಾದ ಪರಿಸ್ಥಿತಿಯಲ್ಲಿದೆ. ತಕ್ಷಣವೇ ಹೊಸ ಬಸ್ಸುಗಳನ್ನು ಒದಗಿಸದಿದ್ದರೆ, ಪ್ರಯಾಣಿಕರ ಪರದಾಟ ದಿನೇ ದಿನೇ ಹೆಚ್ಚಾಗಲಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.




