Tumakuru News: ತುಮಕೂರು: ಜಾತಿಗಣತಿ ವಿಚಾರವಾಗಿ ತುಮಕೂರಿನಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಜಾತಿ ಗಣತಿ ಎಲ್ರಿ ನಡಿತಾ ಇದೆ..? ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಷ್ಟೆ ಅದು ಎಂದಿದ್ದಾರೆ.
ಸುಮ್ನೆ ಜಾತಿ ಗಣತಿ ಅಂತಾ ಜನರ ತಲೆಕೆಡಿಸ್ತಿದಿರಾ.. ಅಷ್ಟೇ. ಯಾವ ಯಾವ ಸಮುದಾಯದಲ್ಲಿ ಎಷ್ಟು ಜನ ವಿದ್ಯಾವಂತರಿದ್ದಾರೆ, ಎಷ್ಟು ಜನ ಲಕ್ಷಾದೀಶ್ವರರಿದ್ದಾರೆ.. ಎಷ್ಟು ಜನ ಬಡವರಿದ್ದಾರೆ..? ಅದೆಲ್ಲಾ ಸಮೀಕ್ಷೆ ಮಾಡಿದ್ರೆ ತಾನೆ..ಅವರಿಗೆಲ್ಲಾ ಸರ್ಕಾರ ಏನಾದ್ರೂ ಕಾರ್ಯಕ್ರಮ ಕೊಡೊಕೆ ಸಾಧ್ಯ ಆಗೋದು. ಅದು ಸಮೀಕ್ಷೆ.. ನೀವು ಜಾತಿ ಸಮೀಕ್ಷೆ ಬರಿತೀರಿ ಮುಂದಿನದು ಬಿಟ್ಟು ಬಿಡ್ತಿರಿ. ಬರೆಯಬಾರದು ಬರಿತಿರಾ.. ಬರೆಯಬೆಕಾದ್ದನ್ನ ಬರೆಯೊದಿಲ್ಲ. ಜಾತಿ ಸಮೀಕ್ಷೆ ಅಲ್ಲಾ ಅದು, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಅದು. ಜಾತಿ ಸಮೀಕ್ಷೆ ಮಾಡಲಿಕ್ಕೆ ನನಗಿರೋ ಮಾಹಿತಿ ಪ್ರಕಾರ ಅಧಿಕಾರ ಇಲ್ಲಾ.. ಅದು ಕೇಂದ್ರ ಸರ್ಕಾರಕ್ಕೆ ಮಾತ್ರ ಇರುವಂತದ್ದು ಎಂದು ರಾಜಣ್ಣ ಖಾರವಾಗಿಯೇ ಮಾತನಾಡಿದ್ದಾರೆ..
ಅಳಿದು ಹೋಗ್ತಿರೋ ಜಾತಿ ವ್ಯವಸ್ಥೆ ಮತ್ತೆ ಹೆಚ್ಚಾಗ್ತಿದೆ ಅನ್ನೋ ವಿಚಾರದ ಬಗ್ಗೆ ಮಾತನಾಡಿರುವ ರಾಜಣ್ಣ, ಎಲೆಕ್ಷನ್ ನ ಅಬಾಲೀಷ್ ಮಾಡಕೆ ಹೇಳಿ ಬಿಡಿ..ಜಾತಿ ವ್ಯವಸ್ಥೆ ಹೋಗಬೇಕು ಅಂದ್ರೆ. ಇಲ್ಲಾಂದ್ರೆ ಇನ್ನೂ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಾ ಹೋಗುತ್ತೆ. ಚುನಾವಣೆಗೆ ಜಾತಿ ಬರೋದು, ಯಾರಿಗೆ ಯಾರುನು ಸಹಾಯ ಮಾಡಲ್ಲ. ಯಾರ್ ಜಾತಿಯವನು ಯಾರಿಗೂ ಸಪೋರ್ಟ್ ಮಾಡಲ್ಲ.
ಸ್ವಾರ್ಥಕ್ಕೆ ನಾವು ಜಾತಿ ಹೆಸರೇಳಿಕೊಂಡು ರಾಜಕೀಯದಲ್ಲಿ ಬದುಕೊದು ಅಷ್ಟೇ. ಜಾತಿ ಜನಗಣತಿ ಹಿಂದೆ ಕಾಂತರಾಜು ಮಾಡಿದ್ರು, ಆಮೇಲೆ ಜಯಪ್ರಕಾಶ್ ಹೆಗ್ಡೆ ಬಂದು ರಿಪೋರ್ಟ್ ಕೊಟ್ರು. ಅದು 15 ವರ್ಷದ ಹಳೆಯದು.. ಜಾತಿ ಜನಗಣತಿಯಲ್ಲಿ ನ್ಯಾಯಾಯಲಗಳು ಹೇಳಿರೋದು….10 ವರ್ಷಕ್ಕೊಮ್ಮೆ ಮಾಡಬೇಕು ಅಂತಾ. ಆ ರೀಪೋರ್ಟ್ ಔಟ್ ಡೇಟೆಡ್ ಅಂತಾ ಹೊಸದಾಗಿ ಮಾಡ್ಬೇಕು ಎಂದು ತೀರ್ಮಾನ ಆಗಿತ್ತು ಎಂದು ರಾಜಣ್ಣ ಹೇಳಿದ್ದಾರೆ.