Political News: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಾಯಕರು ಆಕ್ರೋಶ ಹೊರಹಾಕಿದ್ದರು. ಸಚಿವ ದಿನೇಶ್ ಗುಂಡೂರಾವ್ ಕೂಡ, ಈ ಬಗ್ಗೆ ಅಸಮಾಧನ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದರು.
ಬಳಿಕ ಪ್ರತಾಪ್ ಸಿಂಹ ಕೂಡ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ಕೊಟ್ಟು, ಗೌರಿ ಲಂಕೇಶ್ ಹತ್ಯೆ ಆರೋಪಿ ನವೀನ್ ರನ್ನು ಭೇಟಿಯಾಗಿದ್ದೇ ತಪ್ಪು ಎನ್ನುವುದಾದರೆ, ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಆರೋಪಿಗಳಾಗಿರುವ ಸೋನಿಯಾ ಮತ್ತು ರಾಹುಲ್ ಗಾಂಧಿ ಕಾಲಿಗೇಕೆ ಬೀಳುತ್ತೀರಿ ದಿನೇಶ್ ಗುಂಡೂರಾವ್?! ಎಂದು ಪ್ರಶ್ನಿಸಿ, ಈ ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ, ಅನುಭವವಗಳು ವರ್ಗಾವಣೆಯಾಗುವುದಿಲ್ಲ ಎಂದು ನಾನು ಸುಮಾರು ಬಾರಿ ಹೇಳಿದ್ದೇವೆ. ಅದೇ ರೀತಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೇಳಿರುವ ಮಾತು, ಮಾಡಿರುವ ಟ್ವೀಟ್ ಎಲ್ಲಾ ನೋಡಿದಾಗ, ಮಕ್ಕಳಿಗೆ ಅಪ್ಪನಿಗಿರುವ 5 ಅಥವಾ 10 ಪರ್ಸೆಂಟ್ ಬುದ್ಧಿಶಕ್ತಿ, ಅನುಭವ ವರ್ಗಾವಣೆಯಾಗಿಲ್ಲವೆಂಬುದು, ಅವರು ಕೊಟ್ಟಿರುವ ಹೇಳಿಕೆಗಳಿಂದ ಗೊತ್ತಾಗುತ್ತದೆ.
ಯಾಕಂದ್ರೆ ಆರೋಪಿಗೂ, ಅಪರಾಧಿಗೂ ತುಂಬ ವ್ಯತ್ಯಾಸವಿದೆ. ಗೌರಿ ಲಂಕೇಶ್ ಮರ್ಡರ್ ಕೇಸ್‌ನಲ್ಲಿ ಹಲವು ಆರೋಪಿಗಳು ಇನ್ನೂ ಒಳಗಡೆ ಇದ್ದಾರೆ. ಆ ಬಗ್ಗೆ ತುಂಬ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ನವೀನ್ ಎ1 ಆರೋಪಿ ಇದ್ದವನು ಎ 17 ಆರೋಪಿಯಾಗಿದ್ದಾನೆ. ಅವನು ಅಪರಾಧಿ ಎಂದು ಎಲ್ಲಿಯೂ ತೀರ್ಪು ಬಂದಿಲ್ಲ. ನನ್ನ ಆಪ್ತನೆಂದು ನಾನು ಭೇಟಿಯಾಗಿದ್ದೇನೆ ಎಂದು ಪ್ರತಾಪ್ ಸಿಂಹ ಸಮಜಾಯಿಷಿ ನೀಡಿದ್ದರು.
ಅಪ್ಪ ಮಕ್ಕಳ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹಗೆ, ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿಯೇ ಕಾಲೆಳೆದಿದ್ದಾರೆ. ಪ್ರತಾಪ್ ಸಿಂಹ ಅವರೇ, ನಮ್ಮ ತಂದೆಯವರ ಬಗ್ಗೆ ನೀವು ತೋರಿರುವ ಗೌರವಕ್ಕೆ ನಾನು ಆಭಾರಿ. ನೀವು ಹೇಳಿರುವಂತೆ ಅವರ ಅನುಭವಕ್ಕೆ ಹೋಲಿಸಿದರೆ ನನ್ನ ಅನುಭವ ಕಡಿಮೆಯೇ. ಆದರೆ ಸಾರ್ವಜನಿಕ ಸೇವೆಯಲ್ಲಿರುವ ನಾನು ಯಾರನ್ನು ಭೇಟಿಯಾಗಬೇಕು, ಯಾರನ್ನು ಭೇಟಿಯಾಗಬಾರದು ಎಂಬ ಕನಿಷ್ಠ ಪ್ರಜ್ಞೆ, ನೈತಿಕತೆಯನ್ನು ನಾನು ಅವರಿಂದ ಕಲಿತಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಅದನ್ನು ಈವರೆಗೂ ಅಳವಡಿಸಿಕೊಂಡು ಬಂದಿದ್ದೇನೆ. ನಿಮಗೆ ಆ ನೈತಿಕತೆ ಇಲ್ಲವಾದಲ್ಲಿ ಅದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ. ಅಂದಹಾಗೆ ‘ರಾಜಕಾರಣಿಗಳ ಮಕ್ಕಳಿಗೆ ಅನುಭವವಿಲ್ಲ’ ಎನ್ನುವ ನಿಮ್ಮ ಮಾತಿನ ಹಿಂದೆ ಬಿ.ವೈ.ವಿಜಯೇಂದ್ರರನ್ನು ಟೀಕಿಸುವ ಉದ್ದೇಶವಿಲ್ಲ ತಾನೇ? ಎಂದು ವ್ಯಂಗ್ಯವಾಗಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.