Political News: ರ್ಯಾಂಪ್ ವಾಕ್ ಮಾಡಿ ಗಮನ ಸೆಳೆದ ಸಚಿವ ಜ್ಯೋತಿರಾದಿತ್ಯ ಸಿಂಧ್ಯ

Political News: ರಾಜಕಾರಣಿಗಳು ಅಂದ್ರೆ ಬರೀ ರಾಜಕಾರಣ ಮಾಡಿಕೊಂಡು, ವಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ಮಾಡಿಕೊಂಡು ಇರೋದು ಅನ್ನೋದು ಹಳೆಯ ಮಾತು. ಇಂದಿನ ಕಾಲದ ರಾಜಕಾಾರಣಿಗಳು, ಸ್ವಲ್ಪ ಅಪ್ಡೇಟ್ ಆಗಿದ್ದಾರೆ. ಮನಸ್ಸಿಗೆ ಖುಷಿ ಕೊಡುವ ಕೆಲ ಚಟುವಟಿಕೆಗಳಲ್ಲಿ ಭಾಗಿಯಾಗಿ, ಜನರಿಗೂ ಎಂಟರ್‌ಟೇನ್ ಮಾಡಲು ಶುರು ಮಾಡಿದ್ದಾರೆ.

ಸಚಿವ ಜ್ಯೋತಿರಾದಿತ್ಯ ಸಿಂಧ್ಯ ಕೂಡ ಇದೇ ರೀತಿ ರ್ಯಾಂಪ್ ವಾಕ್ ಮಾಡಿ, ಗಮನ ಸೆಳೆದಿದ್ದಾರೆ. ಭಾರತದಲ್ಲಿರುವ ಸುಂದರ ರಾಜಕಾರಣಿಗಳಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಕೂಡ ಒಬ್ಬರು. ಇವರು ದೆಹಲಿಯಲ್ಲಿ ಅಷ್ಟಲಕ್ಷ್ಮೀ ಮಹೋತ್ಸವದ ಫ್ಯಾಷನ್ ಶೋ ನಡೆದಿದ್ದು, ಈ ಫ್ಯಾಷನ್‌ ಷೋನಲ್ಲಿ ಸಿಂಧ್ಯ ರ್ಯಾಂಪ್ ವಾಕ್ ಮಾಡಿದ್ದಾರೆ.

ಇವರಿಗೆ ಡಾ.ಸುಖಾಂತ್ ಮಜೂಮ್‌ದಾರ್ ಎಂಬುವವರು ಸಾಥ್ ನೀಡಿದ್ದು, ಇಬ್ಬರೂ ಸ್ಟೇಜ್‌ ಮೇಲೆ ವಾಕ್ ಮಾಡ್ತಿದ್ರೆ, ಜನ ಎಲ್ಲ ಇವ್ರನ್ನೇ ನೋಡುತ್ತಿದ್ದರು. ಈಶಾನ್ಯ ಭಾರತದ ಪರಂಪರೆಯನ್ನು ತೋರಿಸುವ ಫ್ಯಾಷನ್ ಶೋ ಇದಾಗಿದ್ದು, ಮೂರು ದಿನಗಳ ಕಾಲ ಈ ಫ್ಯಾಷನ್ ಶೋ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

About The Author