Movie News: ನಟಿ ಶ್ರೀಲೀಲಾ ಕನ್ನಡದವರೇ ಆದ್ರೂ, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಪುಷ್ಪ 2ನಲ್ಲಿ ಕಿಸಕ್ ಸಾಂಗ್‌ಗೆ ಸ್ಟೆಪ್ ಹಾಕಿ ಪ್ರಸಿದ್ಧಿ ಪಡೆದಿರುವ ಶ್ರೀಲೀಲಾ ಈಗಾಗಲೇ ಮದುವೆ ವಯಸ್ಸಿಗೆ ಬಂದಿದ್ದಾರೆ, ಈ ಸಮಯದಲ್ಲಿ ತೆಲುಗು ನಟ ಬಾಲಣ್ಣ ಶ್ರೀಲೀಲಾ ಬಗ್ಗೆ ಹೇಳಿಕೊಂದನ್ನು ನೀಡಿದ್ದಾರೆ. ಶ್ರೀಲೀಲಾ ಮದುವೆ ಮಾಡುವ ಜವಾಬ್ದಾರಿ ನನ್ನದು ಎಂದಿದ್ದಾರೆ.
ನಂದಮೂರಿ ಬಾಲಕೃಷ್ಣ. ತೆಲುಗಿನ ಪ್ರಸಿದ್ಧ ನಟ, ರಾಜಕಾರಣಿಯ ಕುಟುಂಬಸ್ಥರಾದ ಇವರಿಗೆ ಶ್ರೀಲೀಲಾ ಮಗಳ ಸಮಾನ, ಆಕೆಯನ್ನು ಕಂಡರೆ ಬಹಳ ಪ್ರೀತಿ, ಕಾಳಜಿ. ಹಾಗಾಗಿ ಈಕೆಯ ಮದುವೆ ಮಾಡುವ ಜವಾಬ್ದಾರಿ ನನ್ನದು ಎಂದು ಬಾಲಣ್ಣ ಹೇಳಿದ್ದಾರೆ. ಭಗವಂತ ಕೇಸರಿ ಎನ್ನುವ ಸಿನಿಮಾದಲ್ಲಿ ಶ್ರೀಲೀಲಾ, ಬಾಲಣ್ಣನವರ ಪುತ್ರಿಯ ಪಾತ್ರ ಮಾಡಿದ್ದರು. ಆಗಿನಿಂದ ಆಕೆಯ ಮೇಲೆ ಪ್ರೀತಿ, ಮಮತೆ, ಕಾಳಜಿ ಹೆಚ್ಚಂತೆ.
ಅನ್‌ಸ್ಟಾಪೇಬಲ್ ವಿತ್ ಬಾಲಯ್ಯ ಎನ್ನುವ ಶೋನಲ್ಲಿ ಶ್ರೀಲೀಲಾ ಮತ್ತು ಪೋಲಿಶೆಟ್ಟಿ ಗೆಸ್ಟ್ ಆಗಿ ಬಂದಿದ್ದರು. ಈ ವೇಳೆ ಬಾಲಯ್ಯ, ಶ್ರೀಲೀಲಾ ನನ್ನ ಮಗಳಿದ್ದ ಹಾಗೆ. ಆಕೆಯನ್ನು ನೋಡಿದರೆ ನನಗೆ ನನ್ನ ಮಗಳ ನೆನಪು ಬರುತ್ತದೆ. ಹಾಗಾಗಿ ನಾನು ಆಕೆಯ ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.
ಅಂದಹಾಗೆ ಬಾಲಯ್ಯ ಇದೇ ಮೊದಲ ಬಾರಿಗೆ ಶ್ರೀಲೀಲಾ ಬಗ್ಗೆ ಈ ರೀತಿ ಮಾತನಾಡಿರಲಿಲ್ಲ. ಈ ಮೊದಲು ಹಲವು ಕಾರ್ಯಕ್ರಮಗಳಿಗೆ ಶ್ರೀಲೀಲಾ ಅವರನ್ನು ಆಹ್ವಾನಿಸಿದ್ದರು. ಆಕೆಗಿರುವ ನಟನೆ, ನೃತ್ಯ ಎಲ್ಲ ಟ್ಯಾಲೆಂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.