Political News: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಅರೆಲ್ತಡಿ ದೈವಸ್ಥಾನಕ್ಕೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಭೇಟಿ ನೀಡಿ,್ ದೈವ ದರ್ಶನ ಪಡೆದಿದ್ದಾರೆ.
1 ಕೇಸ್‌ಗೆ ಸಂಬಂಧಿಸಿದಂತೆ ರೆಡ್ಡಿ ಜೈಲು ಪಾಲಾಗಿದ್ದರು. ಆದರೆ 1 ತಿಂಗಳ“ಳಗೆ ಶಿಕ್ಷೆ ಪೂರ್ಣವಾಗುತ್ತದೆ ಎಂದು ದೈವ ಅಭಯ ನೀಡಿತ್ತು. ದೈವದ ನುಡಿ ನಿಜವಾದ ಬೆನ್ನಲ್ಲೇ, ರೆಡ್ಡಿ ದೈವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ಮೇ 13ರಂದು ಈ ಸ್ಥಳದಲ್ಲಿ ಬ್ರಹ್ಮಕಲಶ ನಡೆದಿತ್ತು. ಈ ಕಾಾರ್ಯಕ್ರಮದಲ್ಲಿ ಗಾಲಿ ಜನಾರ್ಧನ ರೆಡ್ಡಿ ಭಾಗವಹಿಸಬೇಕಿತ್ತು. ಆದರೆ ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ರೆಡ್ಡಿ ಜೈಲು ಪಾಲಾಗಿದ್ದ ಕಾರಣಕ್ಕೆ, ಇಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ರೆಡ್ಡಿ ಆಪ್ತರು ರೆಡ್ಡಿ ಬೇಗ ಜೈಲಿನಿಂದ ಹ“ರಬರುವಂತಾಗಲಿ ಎಂದು ಬೇಡಿದ್ದರು. ಆಗ ದೈವ ಇಂದಿನಿಂದ 1 ತಿಂಗಳ“ಳಗೆ ರೆಡ್ಡಿ ಆಚೆ ಬರಲಿದ್ದಾರೆ ಎಂದು ನುಡಿದಿತ್ತು.
ಇದೀಗ ದೈವ ನುಡಿದ ನುಡಿ ಸತ್ಯವಾಗಿರುವ ಬೆನ್ನಲ್ಲೇ, ರೆಡ್ಡಿ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸವಣೂರಿನ ಇರ್ವೆಲ್‌ನಲ್ಲಿರುವ ಉಳ್ಳಾಕ್ಲು ಮತ್ತು ಕೆಡೆಂಜೋಡಿತ್ತಾಯಿ ಅರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಂಕ್ರಮಣ ಅನ್ನೋದು ದೈವಗಳಿಗೆ ವಿಶೇಷ ದಿನವಾಗಿದ್ದು, ದೈವಗಳಿಗೆ ತಂಬಿಲ ಸೇವೆ ನೀಡಿದ್ದಾರೆ. ಈ ವೇಳೆ ನಳೀನ್ ಕುಮಾರ್ ಕಟೀಲ್ ಸೇರಿ ಹಲವು ಬಿಜೆಪಿ ನಾಯಕರು, ಸ್ಥಳೀಯರು ರೆಡ್ಡಿಯವರಿಗೆ ಸಾಥ್ ನೀಡಿದ್ದಾರೆ. ಅಲ್ಲದೇ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ರೆಡ್ಡಿ ಭೇಟಿ ನೀಡಿದ್ದಾರೆ.