Political News: ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸುರವರ 110ನೇ ಜನ್ಮ ದಿನಾಚರಣೆಯನ್ನು ವಿಧಾನಸೌಧದ ಆವರಣದಲ್ಲಿ ಆಚರಿಸಲಾಯಿತು. ಇದರ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅರಸು ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಸಿಎಂ ಸಿದದ್ರಾಮಯ್ಯ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.
ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪ್ರತೀವರ್ಷ ಸರ್ಕಾರ ದೇವರಾಜ ಅರಸರ ಜನ್ಮದಿನ ಆಚರಣೆ ಮಾಡಿ, ಗೌರವ ಸಲ್ಲಿಸುತ್ತದೆ. ದೇವರಾಜ ಅರಸರು ಸಮಾಜಿಕ ನ್ಯಾಯದ ಹರಿಕಾರರು. ಅವರ ಕಾಲದಲ್ಲಿ ಹಿಂದುಳಿದ ಜಾತಿಯವರನ್ನು ವಿಧನಸೌಧದಕ್ಕೆ ಕರೆತರುವ ಪ್ರಯತ್ನ ಮಾಡಿದವರು ಅರಸರು. ಜೀತ ಪದ್ಧತಿ ರದ್ದು ಮಾಡಿದ್ದರು. ಭೂಸ್ವಾಧೀನ ನಿಯಮ ಜಾರಿಗೆ ತಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೇ 1956 ನವೆಂಬರ್ ತಿಂಗಳಲ್ಲಿ ದೇವರಾಜ ಅರಸರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಜಾತಿ ಬೇಧ ಎಲ್ಲ ಬದಿಗಿರಿಸಿ, ಎಲ್ಲರಿಗೂ ಸಮಾನ ಅವಕಾಶ ನೀಡುವಲ್ಲಿ ಅರಸರ ಪಾತ್ರ ಪ್ರಮುಖವಾದದ್ದು. ಹಾಗಾಗಿ ಇಂದು ನಾನು ಸರ್ಕಾರದ ವತಿಯಿಂದ, 7 ಕೋಟಿ ಕನ್ನಡಿಗರ ವತಿಯಿಂದ ಗೌರವ ಸಲ್ಲಿಸಿದ್ದೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.




