Political News: ಹಾಸನ ಪೊಲೀಸ್ ಠಾಣೆಗೆ ಬಂದ ಸೂರಜ್ ರೇವಣ್ಣ

Hassan News: ಹಾಸನ: ಸೂರಜ್‌ ರೇವಣ್ಣ ವಿರುದ್ಧ ಹಾಸನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂರಜ್ ರೇವಣ್ಣ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.

ನಿನ್ನೆ ನೀಡಿದ್ದ ದೂರಿನ ದಾಖಲಾತಿ ಸಲ್ಲಿಸಲು ಸೂರಜ್ ರೇವಣ್ಣ ಆಗಮಿಸಿದ್ದು, ನಿನ್ನೆ ಸೂರಜ್ ಆಪ್ತ ಶಿವಕುಮಾರ್, ಸಂತ್ರಸ್ತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.  ಈ ಪ್ರಕರಣಕ್ಕೆ ಸಂಬಂಧಿದಂತೆ ಇಂದು ಪೊಲೀಸರಿಗೆ ದಾಖಲೆ ಒದಗಿಸಲು ಸೆನ್ ಠಾಣೆಗೆ ಸೂರಜ್ ಬಂದಿದ್ದಾರೆ.  ಗನ್ನಿಕಡ ತೋದಿಂದ ಪೊಲೀಸರ ಜೊತೆ ಬಂದು, ದೌರ್ಜನ್ಯ ಆರೋಪ‌ ಮಾಡಿದ್ದ ಸಂತ್ರಸ್ತ ಯುವಕ ಸೂರಜ್ ಗೆ ಕರೆ‌ ಮಾಡಿ ಹಲವು ಬೇಡಿಕೆ ಇಟ್ಟಿದ್ದ ಬಗ್ಗೆ ದಾಖಲಾತಿ ಸಲ್ಲಿಸಿದ್ದಾರೆ.

ಹಾಸನದ ಎನ್‌.ಆರ್.ವೃತ್ತದಲ್ಲಿರೋ ಸೈಬರ್ ಕ್ರೈಂ ಠಾಣೆಗೆ ಆಗಮಿಸಿ, ಸಂತ್ರಸ್ತ ಯುವಕ ಸೂರಜ್ ಗೆ ಕರೆ ಮಾಡಿ ಮತ್ತು ಮೆಸೇಜ್ ಮಾಡಿದ್ದ ಆಡಿಯೋ, ಫೋಟೋ ದಾಖಲಾತಿಗಳನ್ನ ನೀಡಲು ಸೆನ್ ಠಾಣೆಗೆ ನೀಡಿದ್ದಾರೆ.

About The Author