Political News: ಚಿಕ್ಕ ಮಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ ಬಿದ್ದಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬಡಿದ ಗ್ರಹಣ! ಇದು ಪದೇ ಪದೇ ಸಾಬೀತಾಗುತ್ತಲೇ ಬಂದಿದ್ದು, ಇಂದು ಚಂದ್ರ ಗ್ರಹಣವಾಗಿದ್ದರೂ, ರಾಜ್ಯದ ಜನರಿಗೆ ಆಡಳಿತಾತ್ಮಕ ಗ್ರಹಣ ಪ್ರತಿದಿನವೂ ಅನುಭವಕ್ಕೆ ಬರುತ್ತಿದೆ ಎಂದು ಸಿ.ಟಿ. ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಗ್ಯಾರಂಟಿಯ ಹೆಸರಿನಲ್ಲಿ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಕೆಎಸ್ಆರ್ಟಿಸಿಯನ್ನು ನಿಶ್ಶಕ್ತಗೊಳಿಸಿದೆ. ಚಿಕ್ಕಮಗಳೂರು ನಗರದ ಕೇಂದ್ರ ಭಾಗದಲ್ಲಿ ಬಸ್ಸೊಂದಕ್ಕೆ ಬೆಂಕಿ ಹತ್ತಿರುವುದು ಆಘಾತಕಾರಿ ಮತ್ತು ಅಪಾಯಕಾರಿ ಎಂದಿದ್ದಾರೆ ಬಿಜೆಪಿ ನಾಯಕ ಸಿ.ಟಿ.ರವಿ.
ರಾಜ್ಯದ ಸರ್ಕಾರಿ ಬಸ್ಗಳ ಫಿಟ್ನೆಸ್ ಪರೀಕ್ಷೆ ನಿಜಕ್ಕೂ ನಡೆಯುತ್ತಿದೆಯೇ? ಕಾಲಕಾಲಕ್ಕೆ ಸರ್ವಿಸ್ ನಡೆಸಲಾಗುತ್ತಿದೆಯೇ? ಅಥವಾ ಹದಗೆಟ್ಟ ಬಸ್ಗಳನ್ನು ರಾಜ್ಯದ ಬೇರೆ ಪ್ರದೇಶಗಳಿಗೆ ಸಾಗಹಾಕಲಾಗುತ್ತಿದೆಯೇ? ತಕ್ಷಣವೇ ರಾಜ್ಯದ ಬಸ್ಗಳ ಕೂಲಂಕಷ ಪರಿಶೀಲನೆ ಆಗಬೇಕು. ಜನರ ಜೀವದ ಜೊತೆ ಆಟವಾಡುವುದು ನಿಲ್ಲಲೇಬೇಕು. ಇಂತಹ ದುರಂತಗಳಿಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.




