Political News: ಮಂಡ್ಯದ ಮದ್ದೂರಿಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಕೆರೆಗೋಡು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಗಜಾನನ ವಿಸರ್ಜನೆ ಮೆರವಣಿಗೆ ಸಮಾರಂಭದಲ್ಲಿ ಭಾಗವಹಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಛಾಟನೆಯಾದ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿ ಉಚ್ಚಾಟನೆ ಮಾಡಿದೆ, ಜನರು ಮಾಡಿದ್ದಾರಾ? ಉಚ್ಚಾಟನೆ ಪಶ್ಚಾತ್ತಾಪ ಇಲ್ಲ. ಹಿಂದೂ ಮತಗಳು ವಿಭಜನೆ ಆಗಬಾರದು. ಹೊಸ ಪಕ್ಷ ಕಟ್ಟಲು ಸಿಎಂ ಹೇಳಿದ್ರ, ಅದಕ್ಕೆ ಅಲ್ಲೆ ಉತ್ತರ ಕೊಟ್ಟಿದ್ದೇವೆ.
ಬಿಜೆಪಿ ನಾಯಕ ಹಿಂದೂತ್ವದ ಆಧಾರದ ಮೇಲೆ ಓಟ್ ಹಾಕ್ತಾರೆ ಅಂತ ಕೇಂದ್ರಕ್ಕೆ ಮಾಹಿತಿ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಯಡಿಯೂರಪ್ಪ ತೆಗೆದರೆ ಬಿಜೆಪಿ ಇರಲ್ಲ ಅನ್ನೋದೆಲ್ಲ ಸುಳ್ಳು. ಬಿಜೆಪಿ ಯಡಿಯೂರಪ್ಪ ಅವರ ಕುಟುಂಬದ ಮೇಲೆ ನಿಂತಿಲ್ಲ, ಯತ್ನಾಳ್ ಆ ಭ್ರಷ್ಟ ಕುಟುಂಬಕ್ಕೆ ಕೈ ಮುಗಿಯುವ ಅಗತ್ಯ ಇಲ್ಲ. ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹೊರಗೆ ಬರಬೇಕು. ಬಿಜೆಪಿಯಲ್ಲಿ ಯತ್ನಾಳ್ ಉಚ್ಚಾಟನೆ ಮಾಡಿರೋದು ತಪ್ಪು ಅಂತ ಹೇಳ್ತಿದ್ದಾರೆ. ಹೈಕಾಮಂಡ್ ಮಾತನಾಡಿಲ್ಲ. ನಾನಾಗೆ ಹೋಗಿ ಶರಣಾಗತಿ ಆಗಲ್ಲ. ವಿಧಾನ ಸಭೆಯಲ್ಲಿ ಗಟ್ಟಿಯಾಗಿ ಹಿಂದೂಗಳ ಬಗ್ಗೆ ಮಾತನಾಡುವ ನಾಯಕ ಇಲ್ಲ. ಡಿಕೆಶಿ, ಅಶೋಕ್, ವಿಜಯೇಂದ್ರ ಎಲ್ಲರ ಬಾಯಿ ಮುಚ್ಚಿಸ್ತಾರೆ. ನನ್ನ ಬಾಯಿ ಮುಚ್ಚಿಸಲು ಆಗಿಲ್ಲ ಏ ಆಯೋಗ್ಯ ನಾನು ನಿಮ್ಮ ಪಕ್ಷಕ್ಕೆ ಬರಲ್ಲ. ಇಷ್ಟು ಗಟ್ಟಿಯಾದ ಕಾರ್ಯಕರ್ತರ ಮಂಡ್ಯದಲ್ಲಿ ಇದ್ದಾರೆ. ಇಷ್ಟು ವರ್ಷ ಯಾಕೆ ಮಂಡ್ಯದಲ್ಲಿ ಅಡ್ಜೆಸ್ಟ್ ರಾಜಕಾರಣ..? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ಇನ್ನು ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಬೇಕು ಎಂಬ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಯತ್ನಾಳ್, ಪ್ರಿಯಾಂಕಾ ಖರ್ಗೆ ಒಬ್ಬ ಮಹಾ ಮೂರ್ಖ. ಇವನು ಒಬ್ಬ ಬಚ್ಚ, ನೇಹರು ಯಾರು ಮಾಡಿಲ್ಲ ಇವನು ಮಾಡ್ತಾನಾ? RSS ಬ್ಯಾನ್ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಒಲೈಕೆಗಾಗಿ ಈ ರೀತಿ ಹೇಳ್ತಾರೆ. RSS ಕಬ್ಜ ಮಾಡಿಲ್ಲ. ಭಾರತ ಭೂಮಿಗೆ ನಮಸ್ಕಾರ ಮಾಡಿ ಹೊಗ್ತಾರೆ. ಮುಸ್ಲಿಮರು ಕಬ್ಜಾ ಮಾಡ್ತಾರಾ? ಹಿಂದೂಗಳ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಿದ್ದಾರೆ. ಮಸೀದಿ ವಶ ಮಾಡಿಕೊಂಡಿದ್ದಾರಾ? ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ ಕ್ರಾಂತಿ ಸಿದ್ದರಾಮಯ್ಯ ಇಳಿಸುವುದು ಸಾಧ್ಯವಿಲ್ಲ. ಅವರನ್ನ ಇಳಿಸಲು ಅಷ್ಟು ಸುಲಭವಲ್ಲ.
ನವೆಂಬರ್ ಕ್ರಾಂತಿ ಆಗಲ್ಲ, ಇವರದೇ ಸರ್ಕಾರ ಇರುತ್ತೆ. ಹಿಂದೂ ಪರವಾದ ಸರ್ಕಾರ ಬರುತ್ತೆ. ಡಿಕೆಶಿಯನ್ನ ಬಿಜೆಪಿ ಕರ್ಕೊಂಡ್ ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ. ಪ್ಲಾನ್ ಇತ್ತು ವಿಜಯೇಂದ್ರ ಪ್ಲಾನ್ ಮಾಡಿದ್ರು ಇವಾಗ ಕೈ ಬಿಟ್ಟಿದ್ದಾರೆ. ನಾನು ಉಚ್ಚಾಟನೆ ಬಳಿಕೆ ಈ ರೀತಿ ನಡೆದಿದೆ. ಡಿಕೆಶಿ ಸಿಎಂ, ವಿಜಯೇಂದ್ರ ಉಪಮುಖ್ಯಮಂತ್ರಿ ಮಾಡಲು ಪ್ಲಾನ್. ಯತ್ನಾಳ್ ಇದ್ರೆ ವಿರೋಧ ಮಾಡ್ತಾನೆ ಅಂತ ಉಚ್ಚಾಟನೆ ಮಾಡಿದ್ರು.