Political News: ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಇದೊಂದು ಶ್ಲಾಘನೀಯ ನಿರ್ಧಾರ: ದಿನೇಶ್ ಗುಂಡೂರಾವ್

Political News: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಯಾಗಿರುವ ಹಿಂದಿಯನ್ನು ರಾಜ್ಯ ಸರ್ಕಾರ ಗ್ರೇಡ್‌ಗೆ ಮಾತ್ರ ಸೀಮಿತಗ“ಳಿಸಿದೆ. ಈ ನಿರ್ಧಾರವನ್ನು ಹಲವರು ಶ್ಲಾಘಿಸಿದ್ದು, ಮತ್ತೆ ಹಲವರು ವಿರೋಧಿಸಿದ್ದಾರೆ.

ಈ ನಿರ್ಧಾರದ ಪರ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕನ್ನಡ ನಾಡಿನ ನಮ್ಮ ಮಕ್ಕಳ ಮೇಲೆ ಹಲವು ದಶಕಗಳಿಂದ ಇದ್ದ ಹಿಂದಿ ಹೇರಿಕೆಯ ಭಯ ಮತ್ತು ಅನ್ಯ ರಾಜ್ಯದ ಆ ಭಾಷೆಯಲ್ಲಿ ಪೇಲಾಗುತ್ತೇವೆ ಎನ್ನುವ ಆತಂಕ ಇಂದಿಗೆ ದೂರವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸದೆ, ಕೇವಲ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ದ್ವಿಭಾಷಾ ನೀತಿಯತ್ತ ಮಹತ್ವದ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.

​ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಶಾಸನಬದ್ಧ ಬದಲಾವಣೆ ತಂದಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಇದೊಂದು ಶ್ಲಾಘನೀಯ ನಿರ್ಧಾರ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

About The Author