Wednesday, July 2, 2025

Latest Posts

Political News: ಇದು ಹಿನ್ನಡೆ ಅಲ್ಲ! ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ: ಹರೀಶ್ ಗೌಡ

- Advertisement -

Political News: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ನಿ) 2025-2030 ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಹರೀಶ್ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ವೇಳೆ ಮಾತನಾಡಿರುವ ಹರೀಶ್ ಗೌಡ, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಬೇಕು. ಹಿಂದೆ ಬಾಗಿಲಿನಿಂದ ನಡೆಸತಕ್ಕದ್ದಲ್ಲ. ಮೈಸೂರಿನಲ್ಲಿ, ಚಾಮರಾಜನಗರದಲ್ಲಿ ನಾವು 1 ಮತಗಳ ಅಂತರದಿಂದ ಸೋತಿದ್ದೇವೆ. ಹಾಗಾಗಿ ಇದು ಹಿನ್ನೆಡೆ ಅಲ್ಲ, ಇದು ಕಾಂಗ್ರೆಸ್ ವಿರುದ್ಧ ಹೋರಾಟ ಎಂದಿದ್ದಾರೆ.

ಕಾನೂನು ಅಡಿಯಲ್ಲಿ 1 ವರ್ಷ ಕೆಲಸ ಮಾಡದವರಿಗೆ ಓಟ್ ಮಾಡುವ ಅವಕಾಶ ಇಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿ 32 ಸಹಕಾರ ಕೇಂದ್ರ ಬ್ಯಾಂಕ್ ಎಲೆಕ್ಷನ್‌ನಲ್ಲಿ ನೂತನವಾಗಿ ಸೇರಿರುವವರಿಗೂ ಓಟ್ ಮಾಡುವ ಅವಕಾಶ ನೀಡಲಾಗಿದೆ. ಅಂಥ ಮತಗಳು ಬರದೇ ಹೋಗಿದ್ದರೆ, ನಾವಿವತ್ತು 9 ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೆವು ಎಂದು ಹರೀಶ್ ಗೌಡ ಹೇಳಿದ್ದಾರೆ.

- Advertisement -

Latest Posts

Don't Miss