Political News: ಬೆಂಗಳೂರಿನಲ್ಲಿಂದು ಗವಿಗಂಗಾಧರೇಶ್ವರನ ದರ್ಶನ ಪಡೆದ ಬಳಿಕ ಮಾಧ್ಯಮದ ಜತೆ ಮಾತನಾಡಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೈತ್ರಿ ವಿಚಾರವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಏನು ಹೇಳ್ತಾರೋ ಅದೇ ಅಂತಿಮ. 2028ರಲ್ಲಿ ಕ್ರಾಂತಿ ಆಗೇ ಆಗುತ್ತದೆ ಎಂದು ರೇವಣ್ಣ ಹೇಳಿದ್ದಾರೆ.
ಇನ್ನು ಗವಿಗಂಗಾಧರೇಶ್ವನ ದರ್ಶನದ ಬಗ್ಗೆ ಮಾತನಾಡಿರುವ ರೇವಣ್ಣ, ನಮ್ಮ ಮನೆಯವರೆಲ್ಲ ಶಿವನ ಭಕ್ತರು. ಹಾಗಾಗಿ ನಾನು ಗವಿಗಂಗಾಧರೇಶ್ವನ ದರ್ಶನ ಮಾಡಿದ್ದೇನೆ. ಈ ದೇವಸ್ಥಾಕ್ಕೆ ಅದರದ್ದೇ ಆದ ಇತಿಹಾಸವಿದೆ. ಗವಿಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ. ಈ ಸೂಚನೆಯಿಂದ ಇಡೀ ವಿಶ್ವ ಶಾಂತಿ ಇಂದ ಇರಲಿ. ನಮ್ಮ ರೈತರು ಮಳೆ ಬೆಳೆಯಿಂದ ಸಮೃದ್ಧರಾಗಿರಲಿ. ದೇವೇಗೌಡರಿಗೆ, ಕುಮಾರಣ್ಣನಿಗೆ ದೇವರು ಶಕ್ತಿ ನೀಡಲು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ರೇವಣ್ಣ ಹೇಳಿದ್ದಾರೆ.




