Political News: ಅನಾರೋಗ್ಯಕ್ಕೀಡಾಗಿದ್ದ ಮಹಿಳೆ ಮನೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ

Political News: ನಂಜನಗೂಡು ತಾಲೂಕಿನ ಹುಲ್ಲಳ್ಳಿ ಗ್ರಾಮದಲ್ಲಿ ಪೂಜಾ ಎಂಬ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು, ಈಕೆಗೆ ನಡೆದಾಡಲು ಕೂಡ ಸಾಧ್ಯವಿಲ್ಲ. ಈಕೆಯ ಪತಿ ಅಪಘಾತದಲ್ಲಿ ಗಾಯವಾಗಿ ನಡೆದಾಡುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ ಮನೆಗೆ ಯಾರೂ ದಿಕ್ಕಿಲ್ಲದಂತಾಗಿತ್ತು.

ಹೀಗಾಗಿ ಚೇತನ್ ಎಂಬ ವ್ಯಕ್ತಿ ಈ ಮನೆಯ ಪರಿಸ್ಥಿತಿಯ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಳಿ ಸಹಾಯ ಕೇಳಿದ್ದ. ಆ ವೀಡಿಯೋ ಕೇಂದ್ರ ಸಚಿವರಾದ ಕುಮಾರಸ್ವಾಮಿಯವರ ಬಳಿ ತಲುಪಿ, ಿಂದು ಅವರು ಪೂಜೆ ಅವನ ನಿವಾಸಕ್ಕೆ ಭೇಟಿ ನೀಡಿದ್ದರು.

ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಕುಮಾರಸ್ವಾಮಿ ಈ ಬಗ್ಗೆ ಬರೆದಿದ್ದು, ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿರುವ ಸಹೋದರಿಗೆ ಈಗ ನಡೆದಾಡಲು ಆಗುತ್ತಿಲ್ಲ. ಅವರ ಪತಿ ರವಿಯವರು ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಅವರಿಗೂ ಸಹ ದುಡಿಯುವುದು ಕಷ್ಟ. ಹೀಗಾಗಿ ಸಹೋದರಿಯ ಪೋಷಕರೇ ಕುಟುಂಬವನ್ನು ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಚೇತನ್ ಎಂಬ ಕ್ರಿಯಾಶೀಲ ಯುವಕ ಈ ಕುಟುಂಬದ ಬಗ್ಗೆ ವಿಡಿಯೋ ಒಂದನ್ನು ಮಾಡಿ “ಕುಮಾರಣ್ಣ ಅವರಿಗೆ ಮುಟ್ಟುವವರೆಗೂ ಈ ವಿಡಿಯೋವನ್ನು ಶೇರ್ ಮಾಡಿ. ಕುಮಾರಣ್ಣ ತಪ್ಪದೇ ಬಂದು ಇವರಿಗೆ ನೆರವಾಗುತ್ತಾರೆ..” ಎಂದು ಸಾರ್ವಜನಿಕರನ್ನು ವಿನಂತಿಸಿದ್ದ.

ಶ್ರೀ ನಂಜುಂಡೇಶ್ವರನ ಕೃಪೆ, ಆ ವಿಡಿಯೋ ನವದೆಹಲಿಯಲ್ಲಿದ್ದ ನನ್ನನ್ನು ತಲುಪಿತು. ಅದನ್ನು ವೀಕ್ಷಿಸಿದ ನಂತರ ಅತೀವ ದುಃಖವೂ ಆಯಿತು. ಸಹೋದರಿಯ ಮನೆಗೆ ತೆರಳಿ ಸಾಂತ್ವನ ಹೇಳಬೇಕೆಂದು ಅಂದೇ ನಿರ್ಧರಿಸಿ ಈ ದಿನ ಅವರ ಮನೆಗೆ ತೆರಳಿ, ಅವರ ಕಷ್ಟವನ್ನು ಆಲಿಸಿ ನನ್ನ ಕೈಲಾದ ನೆರವು ನೀಡಿದ್ದೇನೆ. ಸಹೋದರಿ ಚಿಂತಿಸಬೇಕಿಲ್ಲ, ಅವರ ಕುಟುಂಬದ ಜೊತೆ ನಾನಿದ್ದೇನೆ, ನಮ್ಮ ಜೆಡಿಎಸ್ ಪಕ್ಷವಿದೆ. ಉದಾರಿಗಳಾದ ನಾಡಿನ ಜನರೂ ಇದ್ದಾರೆ. ದೇವರು ಆ ಕುಟುಂಬಕ್ಕೆ ಒಳ್ಳೆಯದನ್ನೇ ಮಾಡುವನೆಂಬ ನಂಬಿಕೆ ನನ್ನದು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

About The Author