ರಾಜಕೀಯ: ಇಂದು ಕಲಾಪ ಆರಂಭವಾಗುತ್ತಿದ್ದಂತೆ ಬಂದಂತಹ ಸಭಾಧ್ಯಕ್ಷರು ನಾನು ಖುಷಿಯಾಗಿದ್ರೆ ನೀವು ಖುಷಿಯಾಗಿರ್ತಿರಿ ನಾನಾ ಬೇಸರದಲ್ಲಿದ್ದರೆ ನೀವು ಬೇಸರದಲ್ಲಿರುತ್ತೀರಿ ಅದಕ್ಕಾಗಿ ನಾನು ಖುಷಿಯಾಗಿದ್ದೇನೆ ಎಂದು ಬೇಗ ಬಂದವು ಹೆಸರನ್ನು ಹೇಳಿದರು . ನಂತರ ಮದ್ಯ ಬಾಯಿ ಹಾಕಿದ ಶಾಸಕ ಸುರೇಶ್ ಗೌಡ ಕೊನೆಯವರೆಗೆ ಇದ್ದವರ ಹೆಸರನ್ನು ಹೇಳಿ ಕೆಲವರು ಮದ್ಯದಲ್ಲೆ ಚಕ್ಕರ್ ಹಾಕಿ ಹೋಗುತ್ತಾರೆ ಎಂದರು.
ಸಭಾಧ್ಯಕ್ಷರು ಹೊಸ ಪದ್ದತಿ ಶುರು ಮಾಡಿರೋದು ಒಳ್ಳೆದು ಎಂದು ಡಿಕೆಶಿ ಹೇಳಿದರು . ನಾನು ಇವತ್ತು ಬೇಗ ಬಂದಿದ್ದೇನೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಹೋಗುವಾಗ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿ ಎಂದು ಸುನೀಲ್ ಕುಮಾರ ಮನವಿ ಮಾಡಿದರು.
ಆಗ ನನ್ನ ಕುರ್ಚಿ ವಾಸ್ತು ಸರಿಯಾಗಿದೆಯಾ ಇಲ್ಲವಾ ಎಂದು ಯು ಟಿ ಖಾದರ್ ಕೇಳಿದಾಗ ಅರಗ ಜ್ಞಾನೆಂದ್ರ ಅವರು ನೀವು ರೇವಣ್ಣ ಅವರನ್ನು ಕೇಳಬೇಕು ಎಂದಾಗ ಇಡೀ ಸದನ ನಗೆ ಕಡಲಲ್ಲಿ ತೇಲಾಡಿತು.
Rashmika Mandanna : ಕಿರಿಕ್ ಬೆಡಗಿಗೆ ಶುರುವಾಯ್ತು ಕನ್ನಡ ಪ್ರೇಮ…?!