Hubli: ಹುಬ್ಬಳ್ಳಿಯಲ್ಲಿಂದು ವೀರಶೈವ – ಲಿಂಗಾಯತ ಶಕ್ತಿ ಪ್ರದರ್ಶನ ತೋರಿಸಲು ನೆಹರೂ ಮೈದಾನದಲ್ಲಿ ವೀರಶೈವ – ಲಿಂಗಾಯತ ಏಕತಾ ಸಮಾವೇಶ ನಡೆಸಲಾಗುತ್ತಿದೆ.
ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜನಿ ಜಗದ್ಗುರುಗಳು, ಸಿದ್ಧಾಂಗಂಗಾ ಶ್ರೀ, ಮೂರು ಸಾವಿರ ಮಠ ಶ್ರೀಗಳ ಸಾನಿಧ್ಯತೆ ಇದೆ. ಈ ಸಮಾವೇಶದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಸಚಿವರಾದ ಶರಣಬಸಪ್ಪ ದರ್ಶನಾಪುರ್, ಈಶ್ವರ್ ಖಂಡ್ರೆ, ಶಂಕರ್ ಬಿದರಿ ವಿಜಯಾನಂದ ಕಾಶಪ್ಪನವರ ಮತ್ತಿತರರು ಭಾಗಿಯಾಗಿದ್ದಾರೆ. ಶಿವಲಿಂಗಕ್ಕೆ ಮಾಲಾರ್ಪಣೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ, ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಆಗಬೇಕು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಒತ್ತಾಯ ಮಾಡುತ್ತೆ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಧರ್ಮ ಅಂತ ಬರೆಸಬೇಕು. ವೀರಶೈವ ಲಿಂಗಾಯತಕ್ಕೆ ತನ್ನದೆಯಾದ ಶ್ರೇಷ್ಠತೆಯಿದೆ. ಮಾನವ ಧರ್ಮಕ್ಕೆ ಒಳಿತಾಗಲಿ ಅಂತ ಹೇಳಿದ್ದು ಪಂಚ ಪೀಠಾಧಿಶ್ವರರು.
ನವಕರ್ನಾಟಕ ನಿರ್ಮಾಣ ಮಾಡಲು ಮಠ ಮಾನ್ಯಗಳ ಕೊಡುಗೆ ಅಪಾರ. ವೀರಶೈವ ಲಿಂಗಾಯತ ಸಮಾಜ ಕವಲು ದಾರಿಯಲ್ಲಿದೆ. ಸಮಾಜದಲ್ಲಿ ಸಾಕಷ್ಟು ಸವಾಲುಗಳಿವೆ. ಸಮಾಜದ ಶಕ್ತಿ ಸಂಘಟನೆಯಲ್ಲಿದೆ. ಸಂಘಟನೆ ಅಂದರೆ ಇನ್ನೊಬ್ಬರ ತುಳಿಯಲು ಅಲ್ಲಾ. ನಮ್ಮ ಅಸ್ಥಿತ್ವಕ್ಕಾಗಿ ಸಮಾಜ ಸಂಘಟನೆ ಬೇಕು. ನಮ್ಮ ಗುರುಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದಾಬೇಕು ಎಂದು ಖಂಡ್ರೆ ಹೇಳಿದ್ದಾರೆ.
ಒಡಕು ಕೆಡುಕನ್ನು ಮಾಡುತ್ತವೆ. ವೀರಶೈವ ಲಿಂಗಾಯತ ಒಂದೇ ಧರ್ಮ ಬೇರೆ ಬೇರೆ ಧರ್ಮ ಅಲ್ಲಾ. ವೀರಶೈವ ಲಿಂಗಾಯತ ಯಾವತ್ತೂ ಒಂದೇ. ಒಡಕಿನಧ್ವನಿ ಬಳಿಸುತ್ತಿರುವುದು ವಿಪರ್ಯಾಸ. ನಮ್ಮ ಸರ್ಕಾರದ ಸಾಮಾಜಿಕ ಜಾತಿಗಣತಿ ನಡೆಯುತ್ತಿದೆ. ಜಾತಿ ಕಲಂ ನಲ್ಲಿ ವೀರಶೈವ ಅಥವಾ ಲಿಂಗಾಯತ ಅಂತ ಬರೆಸಬೇಕು. ಉಪ ಜಾತಿ ಕಲಂ ನಲ್ಲಿ ನಿಮ್ಮ ಒಳಪಂಗಡಗಳು ಬರೆಸಬೇಕು ಎಂದು ಖಂಡ್ರೆ ಹೇಳಿದ್ದಾರೆ.

