Political News: ಬಿಡದಿ ಟೌನ್ ಶಿಪ್‌ಗೆ ರೈತರ ವಿರೋಧ ವಿಚಾರಕ್ಕೆ ಸಂಬಂಧಿಸಿದರಂತೆ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.
ನನ್ನ ಕಾಲದಲ್ಲಿ ತೀರ್ಮಾನ ಎಂದು ನನ್ನ ಹೆಸರಿನ ಶೆಲ್ಟರ್ ತೆಗೆದುಕೊಳ್ಳಬೇಡಿ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳು ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. 9ಸಾವಿರ ಎಕರೆ ಟೌನ್‌ಶಿಪ್‌ಗೆ ಅಕ್ವೈರ್ ಮಾಡಲು ಹೊರಟಿದ್ದಾರೆ. ಈಗಲ್‌ಟನ್ ಗಾಲ್ಫ್ ಕ್ಲಬ್ ಸರ್ಕಾರದ ಕರಾಬು ಆಕ್ರಮಿಸಿದ ಬಗ್ಗೆ ವರದಿಗಳಿವೆ. 2018ರಲ್ಲಿ ಸ್ಕ್ವೇರ್ ಫೀಟ್ ಲೆಕ್ಕದಲ್ಲಿ ತೆಗೆದುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಗಾಲ್ಫ್ ಕ್ಲಬ್‌ಗೆ ಊಟಕ್ಕೆ ಹೋದಾಗ 98ಸಾವಿರ ಬಿಲ್ ಕೊಟ್ಟಿದ್ದರು.ನನಗೆ 98ಸಾವಿರ ಬಿಲ್ ಮಾಡಿದ್ರು ಎಂದು 70ಎಕರೆ ಭೂಮಿಗೆ 984ಕೋಟಿ ಹಾಕಿದ್ರು. ಎಕರೆಗೆ 13ಕೋಟಿ, ಕ್ಯಾಬಿನೆಟ್ ನಿರ್ಧಾರ ಮಾಡಿ ಆ ದರ ನಿಗದಿಪಡಿಸಿದ್ರು. ನಿಮ್ಮವರೇ ಸಿಎಂ, ಸಚಿವರ ಇದ್ದಾಗ ನೀವೆ ಫಿಕ್ಸ್ ಮಾಡಿದ ದರ ಅಲ್ವಾ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ಈಗ ನೀವೆ ರೈತರಿಗೆ 1:3 ಅನುಪಾತದಲ್ಲಿ ಪರಿಹಾರ ಕೊಟ್ಟುಬಿಡಿ. ಡೈರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ರಿ?, ನಿಮ್ಮ ಪಟಾಲಂಗೆ ಎಷ್ಟು ಕೊಟ್ರಿ? ಅಕ್ವೈರ್ ಮಾಡಿ ದುಡ್ಡು ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ.
ಡ್ರೈ ಲ್ಯಾಂಡ್ ಇರುವ ಕಡೆ ಟೌನ್‌ಶಿಪ್ ಮಾಡಿ. ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ. ಯಾವುದೇ ಒತ್ತಡ, ದಬ್ಬಾಳಿಕೆ ರೈತರು ಹೆದರಬಾರದು. ರೈತರೊಂದಿಗೆ ನಾವಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ ನಾನು 2 ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಇವತ್ತು ದರ ನಿಗದಿ ಕೇಳ್ತಿದ್ದಾರೆ ಅಷ್ಟೇ. ನಾನು ಸಿಎಂ ಆಗಿದ್ದಾಗ ಕಬ್ಬು ಮಾರಾಟ ಮಾಡಲು ಆಗುತ್ತಿರಲಿಲ್ಲ. ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಕಬ್ಬು ಒಣಗಿದ್ವು. 25ಸಾವಿರ ಸಾಲಮನ್ನಾ, ಕಬ್ಬು ಮಾರಾಟವಾಗದಿದ್ರೆ 25ಸಾವಿರ ಸಹಾಯಧನ ಕೊಟ್ಟೆ. 250ಕೋಟಿ ರೈತರಿಗೆ ಕೊಟ್ಟೆನು. ವಿಧಾನಸೌದಕ್ಕೆ ಕರೆಸಿ ರೈತರ ಜೊತೆ ಚರ್ಚಿಸಿದೆ. ಸ್ವತಂತ್ರ ಸರ್ಕಾರ ಇಲ್ಲದ ವೇಳೆಯೂ ರೈತರ ಉಳಿವಿಗಾಗಿ ಶ್ರಮವಹಿಸಿದೆ. ಇವರಿಗೇನಾಗಿದೆ ದರಿದ್ರ? ಎಂದು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರನ್ನ 7 ದಿನ ರಸ್ತೆಯಲ್ಲಿ ಮಲಗಿಸಬೇಕಿರಲಿಲ್ಲ ಸರ್ಕಾರ. ರೈತರ ಬಗ್ಗೆ ಕಾಳಜಿ ಇದ್ದಿದ್ರೆ ಈ ರೀತಿ ಮಾಡ್ತಿರಲಿಲ್ಲ. ಆ ಭಾಗಕ್ಕೆ ಸಿಎಂ ಪ್ರವಾಸ ಮಾಡಿದ್ರು ರೈತನ ಕಷ್ಟ ಕೇಳಲಿಲ್ಲ. ಮೇಟಿ ಅಂತಿಮದರ್ಶನಕ್ಕೆ ಹೋದವರು ಪಕ್ಕದಲ್ಲೇ ನಡೆಯುತ್ತಿದ್ದ ಪ್ರತಿಭಟನೆ ಜಾಗಕ್ಕೆ ಹೋಗಬಹುದಿತ್ತಲ್ವಾ? ಅಹಿಂದಾ ಹೆಸರಲ್ಲಿ ದೊಡ್ಡ ರ್ಯಾಲಿ ಮಾಡ್ತೀನಿ ಅಂತಿರಲ್ಲಾ ಯಾವ ಪುರುಷಾರ್ಥಕ್ಕೆ? ರೈತರು ಬೆಲೆ ನಿಗದಿ ಕೇಳಿದ್ರೆ ನಮ್ಮದಲ್ಲ ಕೇಂದ್ರ ಸರ್ಕಾರ ಅಂತೀರಾ? ನಾನು ಸಿಎಂ ಆಗಿದ್ದಾಗ 2 ಬಾರಿ ಮಾಡಿಲ್ವಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಿಮ್ಮ ಜವಾಬ್ದಾರಿ ನೀವು ನಿಭಾಯಿಸಿ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ಎನ್ನೋದನ್ನ ಬಿಡಿ. 25ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದಾಗ ನರೇಂದ್ರ ಮೋದಿ ಬಳಿ ಹೋಗಿದ್ನಾ? ಎಲ್ಲದಕ್ಕೂ ರಾಜಕೀಯ ಬೆರೆಸುವ ಆರೋಪ ನಮ್ಮ ಮೇಲೆ ಮಾಡ್ತಾರೆ. ಹಾಗಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ಸರ್ಕಾರದ ನಿರ್ಧಾರ ನೋಡಿ ಮುಂದಿನ ತೀರ್ಮಾನ ತೆಗೆದುಕ“ಳ್ಳಲಾಗುವುದು. ರೈತರ ಬದುಕಿನ ಜೊತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

