Tumakuru News: ತುಮಕೂರು: ತುಮಕೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಎಂ.ಪಿ.ರೇಣುಕಾಚಾರ್ಯ, ವಿಜಯೇಂದ್ರ ಅಮಿತ್ ಶಾಗೆ ಡಿಕೆಶಿ ಭೇಟಿ ಮಾಡಿಸಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದು ಡಿಸೆಂಬರ್ 2025 ರ ಜೊಕ್, ಕಾಮಿಡಿ ಪೀಸು. ನನ್ನ ಬಾಯಲ್ಲಿ ಆ ವ್ಯಕ್ತಿಯ ಹೆಸರು ಬರಲ್ಲ. ಬಿಜೆಪಿಯಿಂದ ಉಚ್ಚಾಟಿತಾಗಿದ್ದಾರೆ, ಬಿಜೆಪಿ ವಿರುದ್ದ ಮಾತಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಪ್ರತಿದಿನ ವಿಜಯೇಂದ್ರ, ಯಡಿಯೂರಪ್ಪನವರ ಹೆಸರು, ದೊಡ್ಡವರ ಹೆಸರು ಹೇಳಿದ್ರೆ. ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ ದೊಡ್ಡವರ ಹೆಸರು ಹೇಳಿದ್ರೆ ನಾನು ದೊಡ್ಡವನಾಗ್ತಿನಿ. ಬೇರೆ ಕೆಲಸ ಇಲ್ಲಾ ಪ್ರತಿದಿನ ಮಾಧ್ಯಮಗಳಲ್ಲಿ ಮಾತನಾಡುವುದೆ ಕೆಲಸ. ಉಚ್ಚಾಟನೆ ಆದ ಮೇಲೆ ನಾನು ಮುಂದಿನ ಮುಖ್ಯಮಂತ್ರಿ ಎಂಬ ಹಗಲು ಗನಸು . ಆಯ್ತು ಹೊಸ ಪಕ್ಷ ಕಟ್ಟಿ, 224 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ನ ವಿಜಯೇಂದ್ರ ಭೇಟಿ ಮಾಡಿದ್ದು ಧರ್ಮಸ್ಥಳದಲ್ಲಿ ನಡೆದ ಘಟನೆ, ರಾಜ್ಯದ ರೈತರ ಸಮಸ್ಯೆ ಬಗ್ಗೆ ಇರಬಹುದು. ಕಾಂಗ್ರೇಸ್ ಜೊತೆ ಹೊಂದಾಣಿಕೆ ಮಾಡುವ ವಿಚಾರ ಅಮಿತ್ ಶಾ ಜೊತೆ ಮಾತನಾಡಲಿಕ್ಕೆ ದೆಹಲಿಗೆ ಹೋಗಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಬಲಿಷ್ಠ ಮಾಡಲಿಕ್ಕೆ ಸಲಹೆ ಪಡೆಯಲು ಹೋಗಿದ್ದಾರೆ. ಏನಾದ್ರೂ ಒಂದು ವಿಷ್ಯ ಬೇಕಲ್ಲಾ…ವಿಜಯೇಂದ್ರ ಹೋಗಿದ್ದ ಪಾರ್ಟಿ ಸಂಘಟನೆಗೆ ಮಾರ್ಗದರ್ಶನ ಪಡೆಯಲಿಕ್ಕೆ. ವಿಜಯೇಂದ್ರ ಅವರಿಗೆ ಸಂಕಲ್ಪ ಇದೆ…ಅಪೇಕ್ಷೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು.
ರಾಜ್ಯದಲ್ಲಿ 140 ಸ್ಥಾನ ಪಡೆಯಲು ಮತದಾರ ಆಶಿರ್ವಾದ ಪಡೆಯಲಿಕ್ಕೆ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡ್ತಿದ್ದಾರೆ. ಬೆಂಗಳೂರಿನಿಂದ ಮೈಸೂರು ವರೆಗೆ ಪಾದಾಯಾತ್ರೆ ಮಾಡಿದ್ರು. ಅಧಿವೇಶನ ದ ಒಳಗೆ ಹೊರಗೆ ಹೋರಾಟ ಮಾಡ್ತಾರೆ. ತನ್ನ ಹುಟ್ಟು ಹಬ್ಬವನ್ನ ಕಬ್ಬು ಬೆಳೆಗಾರರ ಜೊತೆ ರಸ್ತೆಯಲ್ಲಿ ಮಲಗಿ ಅವರ ಜೊತೆ ಆಚರಣೆ ಮಾಡಿಕೊಂಡ್ರು. ರಾಜ್ಯದ ಜ್ವಲಂತ ಸಮಸ್ಯೆಗಳ ವಿರುದ್ದ ವಿಜಯೇಂದ್ರ ಹೋರಾಟ ಮಾಡ್ತಿದ್ದಾರೆ ಎಂದು ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟ್ ಬೀಸಿದ್ದಾರೆ .
ಇನ್ನು ಅಮಿತ್ ಶಾ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿರುವ ರೇಣುಕಾಚಾರ್ಯ, ಬಾಯಿ ಚಪಲಕ್ಕೊಸ್ಕರ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಾರೆ. ಅಮಿತ್ ಶಾ ಡಿ ಕೆ ಶಿಕುಮಾರ್ ಭೇಟಿಯಾಗಿಲ್ಲ. ಇದು ನೂರಕ್ಕೆ ನೂರು ಸುಳ್ಳು…ಇದು ಈ ವರ್ಷದ 2025 ರ ಜೋಕ್. ಇದು ಡಿಸೆಂಬರ್ _2025 ರ ಕಾಮೀಡಿ ಪೀಸು ದೊಡ್ಡ ಜೋಕ್ಸು. ಯಾವುದೇ ಚರ್ಚೆಯಾಗಿಲ್ಲ ಇದು ಸುಳ್ಳು ಎಂದು ಯತ್ನಾಳ್ ವಿರುದ್ದ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.




