Thursday, November 21, 2024

Latest Posts

ಸಾಗರದಿಂದ ಕಾಗೋಡು ತಿಮ್ಮಪ್ಪಗೆ ಕಾಂಗ್ರೆಸ್ ಟಿಕೆಟ್ ಇಲ್ಲ

- Advertisement -

political news:

ಸಾಗರ:

ಈಗಾಗಲೆ ಕೆಲವು ದಿನಗಳ ಹಿಂದೆ  ರಾಜ್ಯ ಕಾಂಗ್ರೆಸ್ ಪಕ್ಷ 224 ರಲ್ಲಿ 124 ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಟಿಕೆಟ್ ಪಡೆದ ಸಂತೋಷದಲ್ಲಿ ಅಭ್ಯರ್ಥಿಗಳು ಭರದಿಂದ ಪ್ರಚಾರ ಕೈಗೊಂಡಿರುವ ಬೆನ್ನಲ್ಲೆ ಟಿಕೆಟ್ ವಂಚಿತರಿಗೆ ಅಸಮದಾನ ಉಂಟಾಗಿದೆ. ಹಾಗಾಗಿ ಟಿಕೆಟ್ ವಂಚಿತರ ಬೆಂಬಲಿಗರು ಆಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ. ಈಗಾಗಲೆ ಟಿಕೆಟ್ ಘೋಷಿಸಿರುವ ಪಟ್ಟಿಯಲ್ಲಿ ಸಿದ್ದರಾಮಯ್ಯ ಸೇರಿ ಹಲವಾರು ಘಟಾನುಗಟಿಗಳ ಹೆಸರಿದ್ದೂ ಕಾಂಗ್ರೆಸ್ ನ ಹಾಲಿ ಶಾಸಕರು ಕೆಲವು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಅಭ್ಯರ್ಥಿಗಳಾಗಿ ಮುಂದುವರಿಯಲಿದ್ದಾರೆ.

ಇದೇ ರೀತಿ ಟಿಕೆಟ್ ವಂಚಿತರ ಸಾಲಿನಲ್ಲಿರುವ ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿಯಾಗಿರುವ ಸಾಗರದ ಕಾಗೋಡು ತಿಮ್ಮಪ್ಪ ಸಹ ಟಿಕೆಟ್ ನಿಂದ ವಂಚಿತರಾಗಿದ್ದು ತಮಗಲ್ಲದಿದ್ದರೂ ತಮ್ಮ ಮಗಳು ರಾಜನಂದಿನಿಗೆ ಟಿಕೆಟ್ ಕೊಡಬಹುದು ಎಂಬ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಕಾಗೋಡುರವರಿಗೂ ಮತ್ತು ಅವರ ಮಗಳು ರಾಜನಂದಿನಿಯನ್ನು ಹೊರತುಪಡಿಸಿ ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣರಿಗೆ ಟಿಕೆಟ್ ನೀಡಿದಕ್ಕೆ ಕಾಗೋಡು ತಿಮ್ಮಪ್ಪ ನವರ ಬಣಗಳಿಂದ ಅಸಮದಾನ ವ್ಯಕ್ತಪಡಿಸುತಿದ್ದಾರೆ. ಗೋಪಾಲಕೃಷ್ಣರಿಗೆ ಬಂಡಾಯವಾಗಿ ಮತ್ತೊಬ್ಬರನ್ನು ಎದುರಾಳಿಯಾಗಿ ನಿಲ್ಲಿಸುತಿದ್ದಾರೆ.

ಸದ್ಯ ಕಾಂಗ್ರೆಸ್​ ಈ ನಿರ್ಧಾರದಿಂದ ಕಾಗೋಡು ಬಣ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಂಡಾಯ ಅಭ್ಯರ್ಥಿ ನಿಲ್ಲಿಸಲು ಪ್ಲಾನ್ ನಡೆಯುತ್ತಿದೆಯಾ ಎಂಬ ಅನುಮಾನ ಎದ್ದಿದೆ. ಇಂದು ಅಥವಾ ನಾಳೆ ಇಬ್ಬರು ಬಂಡಾಯ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಬೇಳೂರು ವಿರುದ್ಧ ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀನಾ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ ಹಕ್ರೆ ಇಬ್ಬರಲ್ಲಿ ಒಬ್ಬರಿಗೆ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸುವ ಸಾದ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಶಾಕ್ ನೀಡಲು ಪ್ಲಾನ್ ನಡೆದಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳು ಬಿಜೆಪಿ ಅಭ್ಯರ್ಥಿಗೆ ವರವಾಗುವುದರಲ್ಲಿ ಅನುಮಾನವಿಲ್ಲ.

ನಿಮ್ಮ ಅಮೂಲ್ಯವಾದ ಮತವನ್ನು ಜೆಡಿಎಸ್ ಗೆ ನೀಡಿ ಮತ ವ್ಯರ್ಥ ಮಾಡಿಕೊಳ್ಳಬೇಡಿ ಅದು ಅಧಿಕಾರಕ್ಕೆ ಬರಲ್ಲ

ದಾವಣಗೆರೆಯಲ್ಲಿ ಮೋದಿ ಮಾತಿನ ಮೋಡಿ

ಉರಿ ಹಚ್ಚಿಸುತ್ತಿರುವ ಉರೀಗೌಡ ನಂಜೇಗೌಡ ಸ್ಟೋರಿ

 

- Advertisement -

Latest Posts

Don't Miss