Political News: ಸಂಸದ ಅನಂತ್ ಕುಮಾರ್ ಹೆಗಡೆ ಮಗ ಆಶುತೋಷ್ ಹೆಗಡೆಗೆ ಪಾಸ್ಪೋರ್ಟ್ ಸಮಸ್ಯೆ ಉಂಟಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಶುತೋಷ್ ವಿರುದ್ಧ ದಾಬಸ್ ಪೇಟೆಯಲ್ಲಿ ದಾಖಲಾಗಿರುವ ದೂರು ಅಡ್ಡಿಯಾಗಿದೆ.
ಹಾಗಾಗಿ ಕೇಸ್ ರದ್ದುಗ“ಳಿಸುವಂತೆ ಅನಂತ್ ಕುಮಾರ್ ಹೆಗ್ಡೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿರುವ ಸಚಿವ ಪ್ರಿಯಾಂಕಾ ಖರ್ಗೆ, ಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ, ಇದು ಬಿಜೆಪಿಯವರ ವರಸೆ! ತಮ್ಮ ಮಗನ ವಿದೇಶ ವ್ಯಾಸಂಗಕ್ಕಾಗಿ ಪಾಸ್ಪೋರ್ಟ್ ಪಡೆಯಲು ಗಲಾಟೆ ಕೇಸ್ ಅಡ್ಡಿಯಾಗುತ್ತಿದೆ ಎಂದು ಅವಲತ್ತುಕೊಂಡಿರುವ ಇದೇ ಬಿಜೆಪಿ ನಾಯಕ ಬಡವರ ಮಕ್ಕಳಿಗೆ ಗಲಾಟೆಗೆ, ದೊಂಬಿಗೆ ಪ್ರಚೋದನೆ ಕೊಡುವುದರಲ್ಲಿ ಎತ್ತಿದ ಕೈ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಬಿಜೆಪಿ ನಾಯಕರು ಎಂದಾದರೂ ತಮ್ಮ ಮಕ್ಕಳಿಗೆ ತೋರಿದ ಕಾಳಜಿಯನ್ನು ಹಿಂದುತ್ವದ ಹೆಸರಲ್ಲಿ ಗಲಾಟೆ ನಡೆಸಿ ಮೈತುಂಬ ಕೇಸ್ ಹಾಕಿಕೊಂಡಿರುವ ಬಡವರ ಮನೆಯ ಮಕ್ಕಳ ಬಗ್ಗೆ ಕನಿಕರ ತೋರಿಸಿದ್ದಾರಾ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.
ಇತರರ ಮನೆಯ ಮಕ್ಕಳನ್ನು ಪ್ರಚೋದಿಸಿ ಧರ್ಮ ರಕ್ಷಣೆ ಹೆಸರಲ್ಲಿ ಗಲಾಟೆಗೆ ಕಳಿಸುವುದು ಬಿಜೆಪಿಗರಿಗೆ ಅತ್ಯಂತ ಪ್ರೀತಿಯ ಕೆಲಸವಾಗಿದೆ, ಬಡವರ ಮನೆಯ ಯುವಕರು ಭವಿಷ್ಯ ರೂಪಿಸಿಕೊಳ್ಳುವುದು ಬೇಡವೇ? ಹತ್ತಾರು ಕೇಸ್ ಹಾಕಿಸಿಕೊಂಡು ಕೋರ್ಟಿಗೆ ಅಲೆಯುವ ಅವರು ಉದ್ಯೋಗ ಪಡೆಯಲು ಆ ಅಡ್ಡಿಯಾಗುತ್ತವೆ ಎಂದು ಬಿಜೆಪಿಗರಿಗೆ ತಿಳಿದಿಲ್ಲವೇ?
ಬಡ ಯುವಕರ ಉನ್ನತ ವ್ಯಾಸಂಗಕ್ಕೆ ಕೇಸ್ ಗಳು ತೊಂದರೆಯಾಗುತ್ತವೆ ಎಂದೆನಿಸಿಲ್ಲವೇ? ಬಡವರೂ ಪಾಸ್ಪೋರ್ಟ್ ಪಡೆದು ವಿದೇಶ ವ್ಯಾಸಂಗ, ವಿದೇಶ ಉದ್ಯೋಗ, ವಿದೇಶ ವ್ಯವಹಾರಗಳನ್ನು ಮಾಡಬಾರದೇ?ಅಂದಹಾಗೆ ನನ್ನ ಕೊನೆಯ ಪ್ರಶ್ನೆ, ಬಿಜೆಪಿ ನಾಯಕರ ಮಕ್ಕಳಿಗೆ ವಿದೇಶ ವ್ಯಸಂಗವೇಕೆ? ಇಲ್ಲೇ ಧರ್ಮ ರಕ್ಷಿಸುವ, ಗೋರಕ್ಷಿಸುವ ಕೆಲಸಗಳು ಸಾಕಷ್ಟಿವೆಯಲ್ಲ? ಎಂದು ಸಾಲು ಸಾಲು ಪ್ರಶ್ನೆ ಕೇಳುವ ಮೂಲಕ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.




