Sunday, March 3, 2024

Latest Posts

ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಪ್ರದರ್ಶನ: ಸಚಿವರ ಅಸಮಾಧಾನ

- Advertisement -

Political News: ಪ್ರಧಾನಿ ನರೇಂದ್ರ ಮೋದಿ‌ ಅವರ ಕನಸು ಮನೆ ಮನೆಗೆ ಕುಡಿಯುವ ಶುದ್ದ ನೀರನ್ನ ಒದಗಿಸಬೇಕು ಎಂಬ ಜೆಜೆಎಂ ಕಾಮಗಾರಿ ಸದ್ಯ ಎಲ್ಲೋ ಒಂದು ಕಡೆ ಕಳಪೆ ಕಾಮಗಾರಿಯಾಗಿ ಕಂಡು ಬರುತ್ತಿದೆ. ಈ ಕುರಿತು ಧಾರವಾಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ವಿನಯ ಕುಲಕರ್ಣಿ ಅವರು ಕಾಮಗಾರಿಯ ವಿರುದ್ದ ಕಿಡಿಕಾರಿದ್ದಾರೆ..ಇನ್ನು ಗ್ರಾಮೀಣಾಭಿವೃದ್ಧಿ ‌ಸಚಿವರಿಂದ ತನಿಖೆ ಮಾಡಿಸಲು ಮುಂದಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ‌ ಅವರ ಕನಸು ದೇಶದ ಪ್ರತಿಯೊಂದು ಮನೆಗೆ ಶುದ್ದ ಕುಡಿಯುವ ನೀರಿನ್ನ ಒದಗಿಸಬೇಕು ಎಂದು ಜಲಜೀವನ್ ಮಿಷನ್ ಯೋಜನೆಯನ್ನ ಜಾರಿಗೆ ತಂದಿದ್ರು.. ಆದರೆ ಅದು ಜಿಲ್ಲೆಗಳಲ್ಲಿ. ಅದು ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರ ಅಳಲಾಗಿದೆ… ಅಲ್ಲದೆ, ಎಲ್ಲಿ ನೋಡಿದರಲ್ಲಿ ಕಳಪೆ ಕಾಮಗಾರಿ, ನೀರಿನ ಕನೆಕ್ಷನ್ ಗಳಿಗೆ ನಳವಿಲ್ಲ, ಸರಿಯಾದ ಮಿಟರ್ ಇಲ್ಲ, ವಾಲ್ ಗಳಿಲ್ಲ, ಮಿಟರ್ ಮುಚ್ಚುವ ಟ್ಯಾಪ್ ಕೂಡಾ ಇಲ್ಲ.

ಈಗಾಗಲೆ‌ ಧಾರವಾಡ ಜಿಲ್ಲೆಯಲ್ಲಿ 1100 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿರುವ ನೀರಿನ ಯೋಜನೆಯ ಕಾಗಾರಿಗಳು ನಡೆದಿವೆ.. ಆದರೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಆತ ಬಿಡಿ ಗುತ್ತಿಗೆದಾರರಿಗೆ ಕಾಮಗಾರಿಯನ್ನ ನೀಡಿ ಕಳಪೆ‌ ಮಟ್ಟದ ಕಾಮಗಾರಿಗಳನ್ನಾಡಿಸುತ್ತಿದ್ದಾರೆ. ಅದರಂತೆ ಗ್ರಾಮಿಣ ಭಾಗದ ಸಿಸಿ ರಸ್ತೆಗಳನ್ನ ಎಲ್ಲೆಂದರಲ್ಲಿ ಅಗೆದು ಅವುಗಳನ್ನು ಮರಳಿ ರಸ್ತೆ ದುರಸ್ತಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ‌ ಜ‌ನರು ಪರದಾಡುವಂತಾಗಿದೆ ಎಂದು ಈ ಯೋಜನೆಗೆ ಜನಸಾಮನ್ಯರು ಹಿಡಿಶಾಪವನ್ನ ಹಾಕುತ್ತಿದ್ದಾರೆ ಎಂದು ಶಾಸಕರೇ ನೇರವಾಗಿ ಗುತ್ತಿಗೆದಾರರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಜೆಜೆಎಂ ವರ್ಕ ಕಳಪೆ ಕಾಮಗಾರಿ ಯಾಗಿದೆ ಎಂದು ಶಾಸನ ವಿನಯ ಕುಲಕರ್ಣಿ, ಸಚಿವ ಸಂತೋಷ್ ಲಾಡ್ ಗರಂ ಆಗಿದ್ದಾರೆ. 1100 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಕಳಪೆ‌ಯಾಗಿದೆ. ಮನೆಮನೆಗೆ ನೀರು ಕೊಡುವ ಕಾಮಗಾರಿ ಸಂಪೂರ್ಣವಾಗಿ ಫೇಲ್ಯೂವರ್ ಆಗಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ನಾನು ಗ್ರಾಮೀಣ ಕ್ಷೆತ್ರದಲ್ಲಿ ಮೂಲ ಗುತ್ತಿಗೆದಾರರನ್ನ ಸಭೆ ಕರೆಯುತ್ತೇನೆ. ನಾನು ಸಪರೇಟ್ ಆಗಿ ಮೂಲ ಗುತ್ತಿಗೆದಾರರ ಸಭೆ ಕರೆಯುತ್ತೇನೆ. ಜಿಲ್ಲೆಯಲ್ಲಿ ಗುತ್ತಿಗೆದಾರರು ಉತ್ತಮವಾದ ಕಾಮಗಾರಿ ಮಾಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಎಲ್ಲ‌ ಸಿ ಸಿ ರಸ್ತೆಗಳನ್ನ ಹಾಳು ಮಾಡಿದ್ದಾರೆ. ಸರಿಯಾಗಿ ರಸ್ಟೋರೆಶನ್ ಮಾಡ್ತಿಲ್ಲ. ನಾನು ಆರ್ ಡಿ ಪಿ ಆರ್ ಸಚಿವರಿಂದ ಜಿಲ್ಲೆಯ ಎಲ್ಲ ಜೆಜೆಎಂ ಕಾಮಗಾರಿಗಳನ್ನ ತನಿಖೆ ಮಾಡಿಸುತ್ತೆನೆ. ಧಾರವಾಡ ಜಿಲ್ಲೆಯ ಎಲ್‌ ಆ್ಯಂಡ ಡಿ ಕಂಪನಿ ಮತ್ತು ಜೆಜೆಎಂ ಬಗ್ಗೆ ತನಿಖೆ ಮಾಡಿಸುತ್ತೆನೆ. ಎಂದು ಶಾಸಕ ವಿನಯ ಕುಲಕರ್ಣಿ ಅವರು ಕಿಡಿ ಕಾರಿದ್ದಾರೆ.

ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸಾಮತೋಷ್ ಲಾಡ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಜೆಜೆಎಂ ನಲ್ಲಿ ಗ್ರಾಮೀಣ ಭಾಗದಲ್ಲಿ 60 ಕ್ಕೂ ಹೆಚ್ಚು ಬೋರವೆಲ್ ಗಳನ್ನ ಕೊರೆಸಲಾಗಿದೆ. ಅವುಗಳಿಗೆ ವಿದ್ಯುತ್ ಕನೆಕ್ಷನ್ ನೀಡದೆ ಇರೋ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕ್ಕೊಂಡಿದ್ದಾರೆ. ಒಂದು ವಾರದಲ್ಲಿ ಜೆಜೆಎಂ ನಲ್ಲಿ ಹಾಕಿರುವ ಬೋರವೆಲ್ ಗಳಿಗೆ ವಿದ್ಯುತ್ ಕನೆಕ್ಷನ್ ಕೊಡಬೇಕು. ಬೋರವೆಲ್ ಕೊರೆಸಿ ವಿದ್ಯುತ್ ಕನೆಕ್ಷನ್ ಕೊಡದೆ‌ ಇದ್ರೆ ಹೇಗೆ ಎಂದು ಖಡಕ್ ವಾರ್ನಿಂಗ್ ಮಾಡಿದರು. ಅಧಿಕಾರಿಗಳು ಗುತ್ತಿಗೆದಾರರು ಮಾಡುವ ದಿವ್ಯ ನಿರ್ಲಕ್ಷಕ್ಕೆ‌ ಬೇಸರ ವ್ಯಕ್ತ ಪಡಿಸಿದ್ದಾರೆ. ಅಧಿಕಾರಿಗಳೇ ನಿಮಗೆ ನಾಚಿಕೆ‌ ಇಲ್ವಾ, ಯಾಕೆ‌ ಹೀಗೆ ದಿವ್ಯ ನಿರ್ಲಕ್ಷ್ಯ ಮಾಡ್ತಿರಾ..? ನೀವು ಸರಿಯಾಗಿ ಕೆಲಸ ಮಾಡಿಲ್ಲ ಅಂದ್ರೆ ಜನರು ನಮಗೆ ಬೈದೆ ಬೈಯ್ತಾರೆ. ಇಡಿ ಜಿಲ್ಲೆಯಲ್ಲಿ ಕಳೆಪೆ ಕಾಮಗಾರಿ ಯಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ 1100 ಕೋಟಿ ವೆಚ್ಚದ ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಪಾಮಗಾರಿಯಾಗಿದೆ ಯಾರ ಬೇಕಾದ್ರೂ ಎನ್ ಬೇಕಾದನ್ನ ಮಾಡೋ ಹಾಗೆ ಆಗಿದೆ..ಈ ಯೋಜನೆಯಲ್ಲಿ ಅಧಿಕಾರಿಗಳಿಂದ ಹಿಡಿದು ಗುತ್ತಿಗೆದಾರರು ಒಬ್ಬರ ಮೆಲೆ‌ ಮತ್ತೊಬ್ಬರು ಹಾಕಿ ಕಾಮಗಾರಿಯನ್ನು ವಿಳಂಬದ ಜೊತೆಗೆ ಕಳಪೆ‌ ಕಾಮಗಾರಿಯನ್ಮ ಮಾಡುತ್ತಿದ್ದಾರೆ..ಎಂದು ಶಾಸಕ ವಿನಯ ಕುಲಕರ್ಣಿ ಅವರು ಇಲಾಖೆಯ ಸಚಿವರಿಂದ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ..ಈ ಯೋಜನೆ ಸಕ್ಸಸ್ ಆಗಬೇಕು ಎಂದರೆ ಧಾರವಾಡ ಜಿಲ್ಲೆಯ ಜೆಜೆಎಂ ಕಾಮಗಾರಿಯನ್ನ ತನಿಖೆಗೆ ಕೊಡ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕ ಬಿ.ಆರ್. ಪಾಟೀಲ್ ರಾಜಿನಾಮೆ ಪ್ರಸ್ತಾಪ

ಅಧಿಕಾರಿ ವಿರುದ್ಧ ಗರಂ ಆದ ಸಂಸದ ವೈ.ದೇವೇಂದ್ರಪ್ಪ

ಹಿರಿಯ ನಟಿ ಲೀಲಾವತಿ ನಿರ್ಮಾಣದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss