Sunday, March 3, 2024

Latest Posts

ಹಿರಿಯ ನಟಿ ಲೀಲಾವತಿ ನಿರ್ಮಾಣದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Bengaluru Political News: ಹಿರಿಯ ನಟಿ ಲೀಲಾವತಿ ಅವರು, ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನೂತನವಾಗಿ, ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಿಸಿದ್ದು, ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆ ಆಸ್ಪತ್ರೆಯನ್ನು ಉದ್ಘಾಟಿಸಿದ್ದಾರೆ. ಈ ಬಗ್ಗೆ ಡಿಕೆಶಿ ಟ್ವೀಟ್ ಮಾಡಿದ್ದು, ಲೀಲಾವತಿಯವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀಮತಿ ಎಂ.ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ಇಂದು ಉದ್ಘಾಟಿಸಿ, ಮಾತನಾಡಿದೆ.

ಹಿರಿಯ ನಟಿ ಶ್ರೀಮತಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್’ರವರು ನನ್ನ ನಿವಾಸಕ್ಕೆ ಬಂದು ತಾವು ಕಟ್ಟಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಉದ್ಘಾಟಿಸಬೇಕೆಂದು ಕೇಳಿಕೊಂಡಿದ್ದರು. ಅದರಂತೆ ನನ್ನ ಸರ್ಕಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಇಂದು ಈ ಆಸ್ಪತ್ರೆಯನ್ನು ಉದ್ಘಾಟಿಸಿದ್ದೇನೆ. ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಾಣ ಮಾಡುವ ಮೂಲಕ ಇಂದು ಲೀಲಾವತಿಯವರು ಹಾಗೂ ವಿನೋದ್ ರಾಜ್’ರವರು ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ನೀಡಿದ್ದಾರೆ.

ಶ್ರೀಮಂತರು ಹಲವಾರು ರೀತಿಯಲ್ಲಿ ದಾನ, ಧರ್ಮ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ ಲೀಲಾವತಿಯವರು ಮೂಕ ಪ್ರಾಣಿಗಳಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಿಸಿ ತೋರಿದ ಸಾಮಾಜಿಕ ಕಳಕಳಿ ಇದೆಲ್ಲವನ್ನು ಮೀರಿದ್ದು. 60 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಲೀಲಾವತಿಯವರು, ಇಂದು ಸಾಮಾಜಿಕ ಸೇವೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪಶುಗಳ ಚಿಕಿತ್ಸೆಗಾಗಿ ಕಟ್ಟಿರುವ ಈ ಆಸ್ಪತ್ರೆ ಯಶಸ್ವಿಯಾಗಿ ನಡೆದುಕೊಂಡು ಹೋಗಲಿ ಹಾಗೂ ಇದಕ್ಕೆ ಬೇಕಾದ ಸಹಕಾರ ಹಾಗೂ ಬೆಂಬಲವನ್ನು ನೀಡುತ್ತೇನೆ ಎಂದು ಹೇಳಿ ಅವರಿಗೆ ಶುಭ ಹಾರೈಸಿದೆ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

‘ಚುನಾವಣಾ ಸಮಯದಲ್ಲಿ ಇನ್ನೂ ಏನೇನು ಆಗುತ್ತೆ ವೆಟ್ ಆ್ಯಂಡ್ ಸಿ’

40% ಕಮಿಷನ್ ಕುರಿತು ನ್ಯಾಯಮೂರ್ತಿಗಳಿಗೆ ದಾಖಲೆ ಸಲ್ಲಿಸಿದ ಕೆಂಪಣ್ಣ!

ಅಂಬಿಕಾಪತಿ ಸಾವಿಗೆ ಬಿಜೆಪಿ ಸರ್ಕಾರದ ಶಾಸಕರೇ ಕಾರಣ: ಕೆಂಪಣ್ಣ

- Advertisement -

Latest Posts

Don't Miss