Friday, October 18, 2024

Latest Posts

Ganesh: ಪಿಒಪಿ ಮೂರ್ತಿಗಳ ನಿಷೇಧಕ್ಕೆ ಅಧಿಕಾರಿಗಳು ಮುಂದಾಗಬೇಕು..!

- Advertisement -

ಹುಬ್ಬಳ್ಳಿ: ಇನ್ನೇನು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ , ಗಣೇಶನನ್ನು ಕೂರಿಸಿ ವಿಜೃಂಭಣೆಯಿಂದ ಆಚರಣೆ ಮಾಡುವುದು ಭಾರತೀಯರ ವಾಡಿಕೆ. ಆದರೆ ಪರಿಸರಕ್ಕೆ ಮತ್ತು ಜಲಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಮೂರ್ತಿಗಳನ್ನು ತಯಾರಿಸಲು ಮತ್ತ ಪ್ರತಿಷ್ಠಾಪಿಸಲು ಸರ್ಕಾರ ನಿಷೇಧ ಮಾಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳನ್ನು ಕೂರಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಆದರೆ ರಾಜ್ಯದ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಸರ್ಕಾರದ ಈ ಕ್ರಮಕ್ಕೆ ಜನ ಕ್ಯಾರೆ ಎನ್ನುತ್ತಿಲ್ಲ.

ಹೌದು ಸ್ನೇಹಿತರೆ ಕೆಲವು ದಿನಗಳ ಮೊದಲೇ ಅಧಿಕಾರಿಗಳು ಸಭೆ ಕರೆದು ಪ್ಲಾಸ್ಟರ್ ಆಪ್ ಪ್ಯಾರಿಸ್ ನಿಂದ ತಯಾರಿಸಿದ ಮಾರ್ತಿಗಳನ್ನು ತಯಾರಿಸಲು ನಿರ್ಬಂಧ ಹಾಕಲಾಗಿದೆ ನಿಯಮ ಉಲ್ಲಂಘನೆ ಮಾಡಿ ತಯಾರಿಸಿದರೆ ಗೋಡಾನ್ಗಳನ್ನು ಸೀಜ್ ಮಾಡುವುದಾಗಿ  ಮತ್ತು ಹೊರ ರಾಜ್ಯಗಳ ಪಿಒಪಿ  ಮೂರ್ತಿಗಳನ್ನು ಜಿಲ್ಲೆ ಪ್ರವೇಶಕ್ಕೆ ನಿಷೇಧ ಎಂದು ಹೇಳಿದ್ದರೂ ರಾಜಾರೋಷವಾಗಿ ಪಿಒಪಿಯಿಂದ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದರು ಹಾಗೂ ಹೊರರಾಜ್ಯದಿಂದ ಮೂರ್ತಿಗಳು ಜಿಲ್ಲೆಗಳಿಗೆ ಪ್ರವೇಶ ಜೋರಾಗಿದೆ.

ಅಧಿಕಾರಿಗಳ ಸಭೆ ಕೇವಲ ಪತ್ರಿಕೆ ಪ್ರಕಟಣೆಗೆ ಸೀಮಿತವೆಂಬಂತೆ ತೋರುತ್ತಿದೆ. ಪಿಒಪಿ ಮೂರ್ತಿಗಳನ್ನು ಕೆರೆ, ಬಾವಿ ಸೇರಿ ಇತರ ಜಲ ಮೂಲಗಳಲ್ಲಿ ವಿಸರ್ಜಿಸಿದರೆ ನೀರು ಹಾಳಾಗುತ್ತದೆ. ಅಲ್ಲದೆ, ಪರಿಸರವೂ ನಾಶವಾಗುತ್ತದೆ. ಹೀಗಾಗಿ ಮಣ್ಣಿನ ಮೂರ್ತಿಗಳಿಗೆ ಮಾತ್ರ ಅವಕಾಶ ನೀಡಬೇಕು ಎಂಬುದು ಪರಿಸರ ಪ್ರೇಮಿಗಳ ವಾದ. ಇಷ್ಟೆಲ್ಲ ವಿರೋಧದ ನಡುವೆಯೂ ಪಿಒಪಿ ಮೂರ್ತಿಗಳ ನಿಷೇಧಕ್ಕೆ ಜಿಲ್ಲಾಡಳಿತ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಏನೆಲ್ಲ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಕಾದಿ ನೊಡಬೇಕಿದೆ.

Body building: ಮಿಸ್ಟರ್ ಉತ್ತರ ಕರ್ನಾಟಕ -2023 ದೇಹದಾರ್ಢ್ಯ ಸ್ಪರ್ಧೆ..!

Dharawad: ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಣೆ ಕುರಿತು ಸಭೆ..!

Blood donate: ಬಿಜೆಪಿ ಯುವ ಮೋರ್ಚಾ ಗುಡಿಬಂಡೆ ಮಂಡಲ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

- Advertisement -

Latest Posts

Don't Miss