ಮ್ಯೂಸಿಕ್ ವೀಡಿಯೋವೊಂದರ ಶೂಟಿಂಗ್ ವೇಳೆ ಪಾಪ್ ಗಾಯಕಿ ಮಾಯೆಟಾಗೆ ಹಾವು ಕಚ್ಚಿದೆ. ಈ ಘಟನೆ ಹೋದ ವಾರವೇ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೀಡಿಯೋವನ್ನ ಗಾಯಕಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹಾವು ಕಚ್ಚಿದ್ದು ಸುದ್ದಿಯಾಗಿರುವ ಬೆನ್ನಲ್ಲೇ ಈ ಸುದ್ದಿ ವೈರಲ್ ಆಗಿದೆ.
21 ವರ್ಷದ ಮಾಯೇಟಾ ಕಾರ್ಪೆಟ್ ಮೇಲೆ ಮಲಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಅಕ್ಕಪಕ್ಕದಲ್ಲಿ ಕೆಲ ಹಾವುಗಳಿದ್ವು. ಅವನ್ನು ಮೈ ಮೇಲೆ ಹಾಕಿಕೊಂಡು ಈ ಸಿಂಗರ್ ಶೂಟಿಂಗ್ ಮಾಡುತ್ತಿದ್ದರು. ಅದರಲ್ಲಿ ಒಂದು ಹಾವು ಈಕೆಯ ಮುಖಕ್ಕೆ ಕಚ್ಚಿದೆ. ಅದೃಷ್ಟವಶಾತ್ ಅದು ವಿಷ ರಹಿತ ಹಾವಾಗಿದ್ದು, ಗಾಯಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ವೀಡಿಯೋವನ್ನ ಖುದ್ದು ಪಾಪ್ ಗಾಯಕಿಯೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋವನ್ನ 4.8 ಲಕ್ಷ ಜನ ನೋಡಿದ್ದಾರೆ. ಅಲ್ಲದೇ, ನಿಮ್ಮ ಶೋಕಿಗಾಗಿ ಫೋಟೋ ಶೂಟ್ ಮಾಡಿಸಿಕೊಳ್ಳಲು, ಪ್ರಾಣಿಗಳನ್ನು ಹಿಂಸೆ ಮಾಡಬೇಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.instagram.com/p/CXrFm1dJ7FU/