ರಿಸ್ಕ್ ಕಡಿಮೆ, ರಿಟರ್ನ್ ಭರ್ಜರಿ – ಮಗಳಿಗಾಗಿ ₹22 ಲಕ್ಷ ಗಳಿಸುವ ಪ್ಲ್ಯಾನ್!

ಪೋಸ್ಟ್ ಆಫೀಸ್ ಹೂಡಿಕೆ ಅಂದ್ರೆ ಬರೀ ಶೇ. 6ರಿಂದ 7ರಷ್ಟು ಬಡ್ಡಿ ಬರುವ ಬೋರಿಂಗ್ ಇನ್ವೆಸ್ಟ್‌ಮೆಂಟ್ ಅಂತ ಅನ್ಕೊಂಡಿದ್ದೀರಾ? ಹಾಗಿದ್ರೆ ಈ ಸುದ್ದಿ ಕೇವಲ ನಿಮಗಾಗಿ! ‘ಯಾವುದೇ ರಿಸ್ಕ್ ತೆಗೆದುಕೊಳ್ಳದೆ, ಕೇವಲ 5 ಲಕ್ಷ ರೂಪಾಯಿ ಹೂಡಿಕೆ ಮಾಡಿ ನಿಮ್ಮ ಮಗಳ ಭವಿಷ್ಯಕ್ಕಾಗಿ ಬರೋಬ್ಬರಿ 22 ಲಕ್ಷ ರೂಪಾಯಿ ಸಂಪಾದಿಸುವುದು ಹೇಗೆ ಗೊತ್ತಾ?

ಹೌದು, ಇದಕ್ಕೆ ನೀವು ಬಳಸಬೇಕಿರುವುದು ಒಂದು ‘ಡಬಲ್ ಇಂಜಿನ್ ಸ್ಟ್ರಾಟಜಿ’! ಮೊದಲನೆಯದಾಗಿ, ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಅಂದ್ರೆ POMIS ನಲ್ಲಿ 5 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿ. ಇದರಿಂದ ನಿಮಗೆ ಪ್ರತಿ ತಿಂಗಳು ಮೂರು ಸಾವಿರದ ಎಂಭತ್ತಮೂರು ರೂಪಾಯಿ ಬಡ್ಡಿ ಆದಾಯ ಸಿಗುತ್ತದೆ. ಈಗ ಈ ಬಡ್ಡಿ ಹಣವನ್ನು ಹಾಗೆಯೇ ಸುಕನ್ಯಾ ಸಮೃದ್ಧಿ ಯೋಜನೆ ಅಂದ್ರೆ SSY ಖಾತೆಗೆ ಪ್ರತಿ ತಿಂಗಳು ಆಟೋಮ್ಯಾಟಿಕ್ ಆಗಿ ವರ್ಗಾಯಿಸಬೇಕು.

10 ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ತೆರೆಯಬಹುದಾದ ಈ SSY ಯೋಜನೆಗೆ ಶೇ. 8.2ರಷ್ಟು ಆಕರ್ಷಕ ಬಡ್ಡಿ ಸಿಗಲಿದೆ. 15 ವರ್ಷಗಳ ಕಾಲ ನೀವು POMIS ಬಡ್ಡಿ ಹಣವನ್ನೇ ಇಲ್ಲಿಗೆ ಜಮೆ ಮಾಡುತ್ತೀರಿ. 21 ವರ್ಷಗಳು ಪೂರ್ಣಗೊಂಡ ಬಳಿಕ, ನಿಮ್ಮ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಸುಮಾರು 17 ಲಕ್ಷ ರೂಪಾಯಿ ಜಮೆಯಾಗಿರುತ್ತದೆ! ಜೊತೆಗೆ ನಿಮ್ಮ ಮೂಲ 5 ಲಕ್ಷ ರೂಪಾಯಿ POMIS ನಲ್ಲಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಒಟ್ಟಾರೆಯಾಗಿ ನಿಮ್ಮ ಮಗಳ ಕೈಗೆ ಬರೋಬ್ಬರಿ 22 ಲಕ್ಷ ರೂಪಾಯಿ ಸಿಕ್ಕಂತಾಗುತ್ತದೆ.

ಒಂದು ವೇಳೆ ನೀವು ಪತಿ-ಪತ್ನಿ ಜಂಟಿ ಖಾತೆ ಮೂಲಕ ಹೆಚ್ಚಿನ ಹಣ ಹೂಡಿಕೆ ಮಾಡಿದರೆ, SSY ಖಾತೆಯಲ್ಲಿ 50 ಲಕ್ಷದಿಂದ 60 ಲಕ್ಷ ರೂಪಾಯಿವರೆಗೂ ಬೃಹತ್ ಮೊತ್ತವನ್ನು ಗಳಿಸಬಹುದಾಗಿದೆ. ನೆನಪಿಡಿ, ಪ್ರತಿ 5 ವರ್ಷಕ್ಕೊಮ್ಮೆ POMIS ಖಾತೆಯನ್ನು ರಿ-ಇನ್ವೆಸ್ಟ್ಮೆಂಟ್ ಮಾಡಬೇಕಾಗುತ್ತದೆ ಹಾಗೂ ಮಗಳಿಗೆ 18 ವರ್ಷ ತುಂಬಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಶೇ. 50ರಷ್ಟು ಹಣವನ್ನು ಡ್ರಾ ಮಾಡಿಕೊಳ್ಳಲು ಅವಕಾಶವಿದೆ.

ಕೈಯಿಂದ ಪ್ರತಿ ತಿಂಗಳು ಕಷ್ಟಪಟ್ಟು ಹಣ ಕಟ್ಟದೆ, ಯಾವುದೇ ಅಪಾಯವಿಲ್ಲದೆ ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಇದೊಂದು ಅತ್ಯುತ್ತಮ ಆರ್ಥಿಕ ಯೋಜನೆಯಾಗಿದೆ. ಇಂದೇ ನಿಮ್ಮ ಪೋಸ್ಟ್ ಆಫೀಸ್ ಅನ್ನು ಸಂಪರ್ಕಿಸಿ ಯೋಜನೆ ಆರಂಭಿಸಿ.

About The Author